ಸಿನಿಮಾ

7
ಈ ವಾರ ತೆರೆಗೆ

ಸಿನಿಮಾ

Published:
Updated:

ರಾಜಾಸಿಂಹ

ಸಿ.ಡಿ. ಬಸಪ್ಪ ನಿರ್ಮಿಸಿರುವ, ಅನಿರುದ್ಧ್ ನಾಯಕನಾಗಿ ಅಭಿನಯಿಸಿರುವ ಚಿತ್ರ ಇದು. ರವಿರಾಮ್ ನಿರ್ದೇಶನದ ಈ ಚಿತ್ರಕ್ಕೆ ಜೆಸ್ಸಿಗಿಫ್ಟ್‌ ಸಂಗೀತ ನೀಡಿದ್ದಾರೆ. ಸಾಧು ಕೋಕಿಲ ಹಿನ್ನೆಲೆ ಸಂಗೀತ ನೀಡಿದ್ದಾರೆ. ವಿಷ್ಣುವರ್ಧನ್ ಛಾಯಾಗ್ರಹಣ ಚಿತ್ರಕ್ಕಿದೆ. ಅಂಬರೀಷ್, ಭಾರತಿ ವಿಷ್ಣುವರ್ಧನ್, ನಿಖಿತಾ ತುಕ್ರಾಲ್, ಸಂಜನಾ ಗರ್ಲಾನಿ, ಶರತ್ ಲೋಹಿತಾಶ್ವ, ಅರುಣ್ ಸಾಗರ್, ಬುಲ್ಲೆಟ್ ಪ್ರಕಾಶ್, ಚಿತ್ರಾ ಶೆಣೈ, ವಿಜಯ್ ಚೆಂಡೂರ್ ತಾರಾಬಳಗದಲ್ಲಿ ಇದ್ದಾರೆ.

ಜವ

ವಚನ್ ಶೆಟ್ಟಿ, ವೀರೇಂದ್ರ ಮತ್ತು ವಿದ್ಯಾವೃಥ್ ನಿರ್ಮಿಸಿರುವ ಚಿತ್ರ ‘ಜವ’. ಅಭಯ್ ಚಂದ್ರ ಇದರ ನಿರ್ದೇಶಕ. ವಿನಯ್ ಚಂದ್ರ ಸಂಗೀತ, ಎಂ.ಯು. ನಂದಕುಮಾರ್ ಛಾಯಾಗ್ರಹಣ ಚಿತ್ರಕ್ಕಿದೆ. ಸಾಯಿಕುಮಾರ್, ದಿಲೀಪ್ ರಾಜ್, ಭವಾನಿ ಪ್ರಕಾಶ್, ಕುಶಾಲ್ ಬಿ.ಕೆ, ನಾಗಿಣಿ ಭರಣ ಮತ್ತು ಇತರರು ತಾರಾಬಳಗದಲ್ಲಿ ಇದ್ದಾರೆ.

ಮಂಜರಿ

ಕಿರಣ್ ಗೌಡ ಮತ್ತು ಶಂಕರ್ ನಿರ್ಮಾಣದ ಚಿತ್ರ ಇದು. ವಿಶೃತ್ ನಾಯಕ್ ಇದರ ನಿರ್ದೇಶಕ. ಮ್ಯಾಥ್ಯುಸ್ ಮನು ಸಂಗೀತ, ಬಿ.ಆರ್. ಮನು ಛಾಯಾಗ್ರಹಣ ಚಿತ್ರಕ್ಕಿದೆ. ತಾರಾಬಳಗದಲ್ಲಿ ಪ್ರಭು ಮುಂಡ್ಕರ್, ರೂಪಿಕಾ, ವಿಜಯ್ ಚೆಂಡೂರ್, ಮೀಸೆ ಆಂಜನಪ್ಪ, ಅಮಿತ್, ಪವಿತ್ರಾ ಹಾಗೂ ಇತರರು ಇದ್ದಾರೆ.

ಆ ಒಂದು ದಿನ

ರವೀಂದ್ರಗೌಡ ಎನ್. ಪಾಟೀಲ ನಿರ್ಮಾಣದ ಚಿತ್ರ ‘ಆ ಒಂದು ದಿನ’. ಸಂಜಯ್ ಇದರ ನಿರ್ದೇಶಕ. ಶ್ರೀಹರ್ಷ ಸಂಗೀತ, ಬಾಲಗಣೇಶನ್ ಛಾಯಾಗ್ರಹಣ ಚಿತ್ರಕ್ಕಿದೆ. ವಿಜಯ್ ದೇಸಾಯಿ, ರಾಜ್ ಬಹದ್ದೂರ್, ಸಿಮ್ರನ್ ಮುಂತಾದವರು ತಾರಾಬಳಗದಲ್ಲಿದ್ದಾರೆ.

ಸಂಜೀವ

ಇದು ಹೊಸ ಪ್ರಯತ್ನದ ಚಿತ್ರ ಎಂದು ತಂಡ ಹೇಳಿಕೊಂಡಿದೆ. ಇದರ ನಿರ್ಮಾಪಕರು ಎಸ್. ಮೋಹನ್ ಮತ್ತು ಎನ್.ವಿ. ರಮೇಶ್. ಚಂದನ್ ಶೆಟ್ಟಿ ಸಂಗೀತ ನಿರ್ದೇಶನ, ಪರಮೇಶ್ ಮತ್ತು ಆನಂದ್ ಅವರ ಛಾಯಾಗ್ರಹಣ ಚಿತ್ರಕ್ಕಿದೆ. ಚೇತನ್ ಗಂಧರ್ವ, ಲೇಖಚಂದ್ರ, ದೇವರಾಜ್, ಸಾಧು ಕೋಕಿಲ, ಶುಭಾ ಪೂಂಜಾ, ಅಚ್ಯುತ್ ಕುಮಾರ್, ಶ್ರೀನಗರ ಕಿಟ್ಟಿ, ಯೋಗೀಶ್ ತಾರಾಗಣದಲ್ಲಿ ಇದ್ದಾರೆ.

ದೇವ್ರಂಥ ಮನುಷ್ಯ

ಪ್ರಥಮ್ ಅವರ ಪ್ರಥಮ ಚಿತ್ರ ಇದು. ಕಿರಣ್ ಶೆಟ್ಟಿ ಇದರ ನಿರ್ದೇಶಕ. ಎಚ್.ಸಿ. ಮಂಜುನಾಥ್, ಕೆ. ತಿಮ್ಮರಾಜು ನಿರ್ಮಾಪಕರು. ಶ್ರುತಿ ಮತ್ತು ವೈಷ್ಣವಿ ನಾಯಕಿಯರು. ತಬಲಾ ನಾಣಿ, ಸುಚೇಂದ್ರ ಪ್ರಸಾದ್ ತಾರಾಬಳಗದಲ್ಲಿ ಇದ್ದಾರೆ. ಪ್ರದ್ಯೋತನ್ ಸಂಗೀತ, ಅರುಣ್ ಸುರೇಶ್ ಛಾಯಾಗ್ರಹಣ ಈ ಚಿತ್ರಕ್ಕಿದೆ.

ಜಂತರ್ ಮಂತರ್

ಶಿವಸುಂದರ್, ಬಿ. ನಾಗರಾಜ್, ಡಿ. ಸಾಲುಂಡಿ ಅವರು ಜೊತೆಯಾಗಿ ನಿರ್ಮಿಸಿರುವ ಹಾಸ್ಯಮಯ ಚಿತ್ರ ಇದು. ಇದರ ನಿರ್ದೇಶನ ಗೋವಿಂದೇಗೌಡ ಅವರದ್ದು. ಸುರೇಶ್ ಬಾಬು ಛಾಯಾಗ್ರಹಣ, ರಾಕಿ ಸೋನು ಸಂಗೀತ ಚಿತ್ರಕ್ಕಿದೆ. ಶಿವರಾಜ್ ಕೆ.ಆರ್. ಪೇಟೆ, ನಯನಾ, ಸಂಭ್ರಮ, ಗೋವಿಂದೇಗೌಡ, ಹಿತೇಶ್, ದಿವ್ಯಶ್ರೀ, ಸಂಜು ಬಸಯ್ಯ, ಶೋಭರಾಜ್, ವಿ. ಮನೋಹರ್ ತಾರಾಗಣದಲ್ಲಿ ಇದ್ದಾರೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry