ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವ ಜನಾಂಗಕ್ಕೆ ಹೆಚ್ಚಿನ ಉದ್ಯೋಗವಕಾಶ: 'ಮುದ್ರಾ'ಗೆ ₹3 ಲಕ್ಷ ಕೋಟಿ ಅನುದಾನ

Last Updated 1 ಫೆಬ್ರುವರಿ 2018, 13:59 IST
ಅಕ್ಷರ ಗಾತ್ರ

ನವದೆಹಲಿ: ಸ್ವಂತ ವ್ಯಾಪಾರ ಹಾಗೂ ಕಿರು ಉದ್ದಿಮೆಯನ್ನು ಪ್ರೋತ್ಸಾಹಿಸಲು ಕೇಂದ್ರ ಸರ್ಕಾರ ಆರಂಭಿಸಿರುವ ಪ್ರಧಾನಮಂತ್ರಿ ಮುದ್ರಾ ಯೋಜನೆಗೆ(ಪಿಎಂಎಂವೈ) ಈ ಬಜೆಟ್‍ನಲ್ಲಿ ₹3 ಲಕ್ಷ  ಕೋಟಿ ಅನುದಾನ ಘೋಷಿಸಲಾಗಿದೆ. ಯುವ ಜನಾಂಗವನ್ನು ಆಕರ್ಷಿಸುವ ಸಲುವಾಗಿ ಅರುಣ್ ಜೇಟ್ಲಿ 2018-19  ಸಾಲಿನ ಬಜೆಟ್‍ನಲ್ಲಿ ಶೇ.20 ರಷ್ಟು ಹೆಚ್ಚಿಗೆ ಅನುದಾನವನ್ನು ಮುದ್ರಾಗೆ ನೀಡಿದ್ದಾರೆ.

ಮುದ್ರಾ ಯೋಜನೆಯಡಿಯಲ್ಲಿ ಸಾಲ ನೀಡುವ ಮೂಲಕ ಬಡ್ಡಿ ವಸೂಲಿ ಮಾಡುವ ಸಾಲಗಾರರಿಂದ ಕಿರು ಉದ್ದಿಮೆದಾರರನ್ನು ಮುಕ್ತಗೊಳಿಸುವುದು ಈ ಯೋಜನೆಯ ಉದ್ದೇಶವಾಗಿದೆ. ನಿರ್ಮಾಣ, ಸೇವೆ ಮತ್ತು ವ್ಯಾಪಾರ ವಲಯಗಳ ಉದ್ದಿಮೆಗಳಿಗೂ ಮುದ್ರಾ ಸಾಲ ಉಪಯೋಗಕ್ಕೆ ಬರಲಿದೆ.
ಸರ್ಕಾರದಿಂದ ಸಾಲ ನೀಡುವ ಮೂಲಕ ಮತ್ತು ವ್ಯಾಪಾರ ಸಂಸ್ಥೆಗಳ ಸಹಯೋಗದೊಂದಿಗೆ ಈಗಾಗಲೇ 5.5 ಕೋಟಿ ಉದ್ಯೋಗ ಸೃಷ್ಟಿಸಿದೆ. ನೌಕರರ ಭವಿಷ್ಯ ನಿಧಿ ಸಂಸ್ಥೆಯಲ್ಲಿ ಹೊಸತಾಗಿ ₹55 ಲಕ್ಷ ಜನರು ನೋಂದಣಿ ಮಾಡಿದ್ದು ಉದ್ಯೋಗ ಸೃಷ್ಟಿಯಾಗಿರುವುನ್ನು ಇದು ತೋರಿಸುತ್ತದೆ. ಎಲ್ಲ ಸಾರ್ವಜನಿಕ, ಖಾಸಗಿ, ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‍ಗಳು, ಆಯ್ದ ಮೈಕ್ರೋಫಿನಾನ್ಸ್ ಸಂಸ್ಥೆ ಮತ್ತು ಸಹಕಾರಿ ಬ್ಯಾಂಕ್‍ಗಳು ಮುದ್ರಾ ಸಾಲವನ್ನು ನೀಡುತ್ತಿವೆ. ₹50000ದಿಂದ  ₹10 ಲಕ್ಷ ವರೆಗೆ ಮುದ್ರಾ ಸಾಲ ಲಭಿಸುತ್ತದೆ.

ಪ್ರತಿ ವರ್ಷ 10 ಲಕ್ಷ ಉದ್ಯೋಗಗಳನ್ನು ಸೃಷ್ಟಿಸುವುದಾಗಿ ಚುನಾವಣಾ ಪ್ರಚಾರದ ವೇಳೆ ನರೇಂದ್ರ ಮೋದಿ ಭರವಸೆ ನೀಡಿದ್ದರು. ಆದರೆ ಅಷ್ಟೊಂದು ಉದ್ಯೋಗವಕಾಶಗಳು ಸೃಷ್ಟಿಯಾಗಲೇ ಇಲ್ಲ. ಆಟೋಮೇಷನ್, ಕೃತಕ ಬುದ್ಧಿಮತ್ತೆ ಮೊದಲಾದ ತಾಂತ್ರಿಕ ವಿದ್ಯೆಗಳಿಂದಾಗಿ ಕೆಲವು ಉದ್ಯೋಗಗಳೂ ನಷ್ಟವಾಗಿವೆ. ಸಂಸ್ಥೆಗಳಲ್ಲಿ ಉದ್ಯೋಗವಕಾಶಗಳಿಗೆ ಕತ್ತರಿ ಬೀಳುತ್ತಿದ್ದಂತೆ ಸ್ವ ಉದ್ಯೋಗಕ್ಕೆ ಉತ್ತೇಜನ ನೀಡುವ ಸಲುವಾಗಿ ಮುದ್ರಾ ಯೋಜನೆ ಜಾರಿ ಮಾಡಲಾಗಿತ್ತು.

2022ರೊಳಗೆ  ₹40 ಕೋಟಿ ಯುವಕರಿಗೆ ಉದ್ಯೋಗ ತರಬೇತಿ ನೀಡುವುದಾಗಿ 2015ರ ಬಜೆಟ್‍ನಲ್ಲಿ ಸರ್ಕಾರ ವಾಗ್ದಾನ ನೀಡಿತ್ತು. ಇದೀಗ 2020ರೊಳಗೆ 50 ಲಕ್ಷ ಮಂದಿಗೆ ತರಬೇತಿ ನೀಡುವುದಾಗಿ ಕೇಂದ್ರ ಸರ್ಕಾರ ಹೇಳುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT