ಆಯ್ಕೆ ಪಟ್ಟಿ ಪ್ರಕಟಿಸಿ

7

ಆಯ್ಕೆ ಪಟ್ಟಿ ಪ್ರಕಟಿಸಿ

Published:
Updated:

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಪಿಡಿಒ ಮತ್ತು ಗ್ರೇಡ್–1 ಕಾರ್ಯದರ್ಶಿ ಹುದ್ದೆಗಳ ನೇಮಕಾತಿ ಅಧಿಸೂಚನೆ ಹೊರಡಿಸಿ, ಸ್ಪರ್ಧಾತ್ಮಕ ಪರೀಕ್ಷೆಗಳು ಸಹ ನಡೆದು, ಇತ್ತೀಚೆಗಷ್ಟೇ ದಾಖಲಾತಿ ಪರಿಶೀಲನೆ ಮುಗಿದಿದೆ. ಇಡೀ ಪ್ರಕ್ರಿಯೆ ಆರಂಭವಾಗಿ ಒಂದೂವರೆ ವರ್ಷವಾಗುತ್ತ ಬಂತು.

ಎರಡೂ ಹುದ್ದೆಗಳ 1624 ಅಭ್ಯರ್ಥಿಗಳು ತಾತ್ಕಾಲಿಕ ಮತ್ತು ಅಂತಿಮ ಆಯ್ಕೆ ಪಟ್ಟಿಗಾಗಿ ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. ಪ್ರಾಧಿಕಾರವು ಆರಂಭದಿಂದಲೂ ನೇಮಕಾತಿ ಪ್ರಕ್ರಿಯೆಯನ್ನು ಆಮೆಗತಿಯಲ್ಲಿ ನಡೆಸುತ್ತಾ ಬಂದಿದೆ. ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವುದರಿಂದ, ಈ ಪ್ರಕ್ರಿಯೆಯನ್ನು ಶೀಘ್ರವಾಗಿ ಮುಗಿಸುವಂತೆ ಸಂಬಂಧಿಸಿದವರು ಪ್ರಾಧಿಕಾರಕ್ಕೆ ನಿರ್ದೇಶನ ನೀಡಬೇಕು.

ಎಸ್.ವಿ. ನಾಗರಾಜ, ಚಿಕ್ಕಮಗಳೂರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry