ಏಕೆ ಈ ಹತಾಶೆ?

7

ಏಕೆ ಈ ಹತಾಶೆ?

Published:
Updated:

ನಾಲ್ಕು ಬಾರಿ ಮುಖ್ಯಮಂತ್ರಿ ಪದವಿ ಕೈತಪ್ಪಿದ ಬಗ್ಗೆ ಕಾಂಗ್ರೆಸ್‌ ಮುಖಂಡ ಜನಾರ್ದನ ಪೂಜಾರಿ ಅವರು ಹೇಳಿಕೊಂಡಿದ್ದಾರೆ (ಪ್ರ.ವಾ., ಜ. 27). ಅವರ

ಅಭಿಪ್ರಾಯ ಸರಿಯೇ, ಆದರೆ ಹೀಗೆ ಒಂದೆರಡು ಬಾರಿ ಮುಖ್ಯಮಂತ್ರಿ ಪದವಿ ತಪ್ಪಿಹೋದ ನಂತರವೂ ಮುಖ್ಯಮಂತ್ರಿ ಆದವರು ಹಲವರಿದ್ದಾರೆ! ಅವರ‍್ಯಾರೂ ಇಂಥ ಹಪಹಪಿಯ ಹೇಳಿಕೆ ನೀಡಿಲ್ಲ. ಅಂಥವರಲ್ಲೊಬ್ಬರು ಈಗ ಕಾಂಗ್ರೆಸ್‌ ತೊರೆದು, ಬಿಜೆಪಿಯ ಶಂಖ ಊದುತ್ತಿದ್ದಾರೆ. ಅಷ್ಟರಮಟ್ಟಿಗೆ ಪೂಜಾರಿಯವರ ಪಕ್ಷನಿಷ್ಠೆ ಮೆಚ್ಚುವಂಥದ್ದು. ಆದರೂ ಅವರಲ್ಲಿ ಹತಾಶೆಯ ಮನಸ್ಥಿತಿ ವಿಜೃಂಭಿಸುತ್ತಿದೆ. ಇದು ಸರಿಯಲ್ಲ. ಏಕೆಂದರೆ ಎಲ್ಲರೂ ಮುಖ್ಯಮಂತ್ರಿ ಆಗಲಾಗುವುದಿಲ್ಲ. ಕಾಲದ ಅನಿವಾರ್ಯ, ತಂತ್ರಗಾರಿಕೆ, ವಿರೋಧಿಗಳನ್ನು ಎದುರಿಸುವ ಗಟ್ಟಿತನ ಮುಂತಾದುವೆಲ್ಲ ಇಲ್ಲಿ ಕೆಲಸ ಮಾಡುತ್ತವೆ.

ನಮಗೆ ಕಡಿದಾಳ್‌ ಮಂಜಪ‍್ಪನವರಂಥ ಆದರ್ಶ ರಾಜಕಾರಣಿಗಳು ನೆನಪಾಗಬೇಕೇ ಹೊರತು ಎಸ್‌.ಎಂ. ಕೃಷ್ಣ ಅವರಂಥ ಅವಕಾಶವಾದಿ ರಾಜಕಾರಣಿಗಳಲ್ಲ. ಈ ಇಳಿವಯಸ್ಸಿನಲ್ಲಿ ಪೂಜಾರಿ ಅವರ ಹಪಹಪಿ ಸರಿಯಲ್ಲ!

ಹುರುಕಡ್ಲಿ ಶಿವಕುಮಾರ, ಬಾಚಿಗೊಂಡನಹಳ್ಳಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry