ಕದಂಬೋತ್ಸವ: ಪಂಪ ಪ್ರಶಸ್ತಿ ಪ್ರದಾನ ಇಂದು

7

ಕದಂಬೋತ್ಸವ: ಪಂಪ ಪ್ರಶಸ್ತಿ ಪ್ರದಾನ ಇಂದು

Published:
Updated:
ಕದಂಬೋತ್ಸವ: ಪಂಪ ಪ್ರಶಸ್ತಿ ಪ್ರದಾನ ಇಂದು

ಶಿರಸಿ: ಬನವಾಸಿಯಲ್ಲಿ ಶುಕ್ರವಾರ ಮತ್ತು ಶನಿವಾರ (ಫೆ.2, 3) ಕದಂಬೋತ್ಸವ ಆಚರಣೆಗೆ ಭರದ ಸಿದ್ಧತೆಗಳು ನಡೆದಿವೆ. ಕದಂಬ ರಾಜಮನೆತನದ ಸ್ಮರಣೆಯಲ್ಲಿ ನಡೆಯುವ ಈ ಉತ್ಸವದಲ್ಲಿ ಪ್ರತಿಷ್ಠಿತ ಪಂಪ ಪ್ರಶಸ್ತಿಯನ್ನು ಕವಿ ಡಾ. ಕೆ.ಎಸ್. ನಿಸಾರ್ ಅಹಮದ್ ಅವರಿಗೆ ಪ್ರದಾನ ಮಾಡಲಾಗುತ್ತದೆ.

ಪುರಾತನ ಮಧುಕೇಶ್ವರ ದೇವಾಲಯದ ಪ್ರತಿಕೃತಿಯ ಮಾದರಿಯಲ್ಲಿ ಸಿದ್ಧವಾಗಿರುವ ವೇದಿಕೆಯಲ್ಲಿ ಸಚಿವ ಆರ್‌.ವಿ.ದೇಶಪಾಂಡೆ ಅವರು ಸಂಜೆ 7 ಗಂಟೆಗೆ ಕದಂಬೋತ್ಸವ ಉದ್ಘಾಟಿಸುವರು. ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ, ಪ್ರವಾಸೋದ್ಯಮ ಸಚಿವ ಪ್ರಿಯಾಂಕ ಖರ್ಗೆ ಭಾಗವಹಿಸುವರು. ಉತ್ಸವದ ಅಂಗವಾಗಿ ಅನಾನಸ್ ಮೇಳ, ಕಾರ್ಟೂನ್ ಉತ್ಸವ, ಗಾಯಕರಾದ ಗುರುಕಿರಣ್ ಹಾಗೂ ಅರ್ಚನಾ ಉಡುಪ ಅವರ ರಸಮಂಜರಿ ಹಮ್ಮಿಕೊಳ್ಳಲಾಗಿದೆ.

ಪಂಪ ಪ್ರಶಸ್ತಿ ಪ್ರದಾನಕ್ಕೆ ಮುಖ್ಯಮಂತ್ರಿ ಬರುತ್ತಿಲ್ಲ. ಗುರುವಾರ ಸಂಜೆ ಶಿರಸಿಗೆ ಆಗಮಿಸಿರುವ ನಿಸಾರ್ ಅಹಮದ್ ಅವರು  ಬನವಾಸಿಗೆ ಭೇಟಿ ನೀಡಿ, ಮಧುಕೇಶ್ವರ ದೇವಾಲಯದ ಶಿಲ್ಪಕಲೆಯನ್ನು ವೀಕ್ಷಿಸಿದರು. ಅಲ್ಲಿಯೇ ಪ್ರವಾಸಕ್ಕೆ ಬಂದಿದ್ದ ಮಕ್ಕಳ ಜೊತೆ ಸಮಯ ಕಳೆದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry