‘ಅಭ್ಯರ್ಥಿಯನ್ನು ಹೆಲಿಕಾಪ್ಟರಲ್ಲಿ ತಂದಿಳಿಸುವುದಿಲ್ಲ’

7
ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್‌ ಹೇಳಿಕೆ

‘ಅಭ್ಯರ್ಥಿಯನ್ನು ಹೆಲಿಕಾಪ್ಟರಲ್ಲಿ ತಂದಿಳಿಸುವುದಿಲ್ಲ’

Published:
Updated:

ಬೆಳಗಾವಿ: ‘ಸಮರ್ಥರು ಹಾಗೂ ಗೆಲ್ಲುತ್ತೇವೆ ಎಂದು ಸಮರ್ಥಿಸಿಕೊಳ್ಳುವವರಿಗೆ ಪಕ್ಷದ ಟಿಕೆಟ್ ಕೊಡುತ್ತೇವೆ. ಯಾರನ್ನೂ ಹೆಲಿಕಾಪ್ಟರಲ್ಲಿ ತಂದಿಳಿಸುವುದಿಲ್ಲ. ಬೇಕಾದ ಅಭ್ಯರ್ಥಿಯನ್ನು ನೀವೇ ಆಯ್ಕೆ ಮಾಡಿಕೊಳ್ಳಿ..’

ಹೀಗೆ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಹೇಳಿದ್ದು, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌. ಬೆಳಗಾವಿ ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತನಾಡಿದರು.

‘ದಕ್ಷಿಣ ಕ್ಷೇತ್ರದಲ್ಲಿ ಕಳೆದ ಚುನಾವಣೆಯಲ್ಲಿ ಶೇ 15ರಷ್ಟು ಮತಗಳನ್ನು ಮಾತ್ರ ಪಡೆದಿದ್ದೇವೆ. ಮುಖಂಡರು ಹಾಗೂ ಕಾರ್ಯಕರ್ತರು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎನ್ನುವುದನ್ನು ಇದು ತೋರಿಸುತ್ತದೆ. ಶತ್ರುವನ್ನು ಎದುರಿಸಬೇಕು ಎನ್ನುವ ರೋಷ ಇಲ್ಲಿ ಬಂದಿಲ್ಲ. ಹೀಗಾಗಿ, ಸೋಲುತ್ತಿದ್ದೇವೆ. ಕ್ಷೇತ್ರದಲ್ಲಿ ಜೀವವಿದ್ದು, ಅದನ್ನು ಬಳಸಿಕೊಳ್ಳಬೇಕು. ಮನೆಗಳನ್ನು ತಲುಪಬೇಕು’ ಎಂದು ಹೇಳಿದರು.

‘ಅನ್ನಭಾಗ್ಯ ಯೋಜನೆಗೆ ಅಕ್ಕಿ ಕೊಡುತ್ತಿರುವುದು ಕೇಂದ್ರ ಸರ್ಕಾರವೇ ಹೊರತು ರಾಜ್ಯವಲ್ಲ ಎಂದು ಬಿಜೆಪಿಯವರು ಅಪಪ್ರಚಾರ ಮಾಡುತ್ತಿದ್ದಾರೆ. ಕೇಂದ್ರವೇ ಅಕ್ಕಿ ಕೊಡುತ್ತಿದೆ ಎಂದಾದರೆ, ಬಿಜೆಪಿಯವರು ಅಧಿಕಾರದಲ್ಲಿರುವ 18 ರಾಜ್ಯಗಳಲ್ಲಿ ಉಚಿತವಾಗಿ ಅಕ್ಕಿ ನೀಡುವ ಯೋಜನೆಯನ್ನೇಕೆ ಜಾರಿ ಮಾಡಲಿಲ್ಲ’ ಎಂದು ಅವರು ಪ್ರಶ್ನಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry