ತಯಾರಿಕಾ ವಲಯ ಪ್ರಗತಿ ಮೂರು ತಿಂಗಳ ಕನಿಷ್ಠ

7

ತಯಾರಿಕಾ ವಲಯ ಪ್ರಗತಿ ಮೂರು ತಿಂಗಳ ಕನಿಷ್ಠ

Published:
Updated:

ನವದೆಹಲಿ: ದೇಶದ ತಯಾರಿಕಾ ವಲಯದ ಪ್ರಗತಿ ಜನವರಿ ತಿಂಗಳಿನಲ್ಲಿ ಮೂರು ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿಕೆಯಾಗಿದೆ.

ಕೈಗಾರಿಕಾ ಪ್ರಗತಿ ಇಳಿಕೆ, ಹೊಸ ಯೋಜನೆಗಳ ತಗ್ಗಿದ ಬೇಡಿಕೆ ಮತ್ತು ಉದ್ಯೋಗ ಸೃಷ್ಟಿ ಮಂದಗತಿಯಲ್ಲಿ ಇರುವುದರಿಂದಾಗಿ ತಯಾರಿಕಾ ವಲಯದ ಪ್ರಗತಿ ಇಳಿಕೆ ಕಂಡಿದೆ ಎಂದು ನಿಕೇಯ್ ಇಂಡಿಯಾ ಸಂಸ್ಥೆ ತಿಳಿಸಿದೆ.

ಮ್ಯಾನ್ಯುಫ್ಯಾಕ್ಚರಿಂಗ್‌ ಪರ್ಚೇಸಿಂಗ್‌ ಮ್ಯಾನೇಜರ್ಸ್‌ ಇಂಡೆಕ್ಸ್‌ (ಪಿಎಂಐ) ಡಿಸೆಂಬರ್‌ನಲ್ಲಿ 54.7 ರಷ್ಟಿತ್ತು. ಅದು ಜನವರಿಯಲ್ಲಿ 52.4ಕ್ಕೆ ಇಳಿಕೆ ಕಂಡಿದೆ.

ಜಿಎಸ್‌ಟಿಯಿಂದ ಆಗಿರುವ ನಕಾರಾತ್ಮಕ ಪರಿಣಾಮ ಸಂಪೂರ್ಣವಾಗಿ ಹೋಗಿಲ್ಲ. ಪಾವತಿಯಲ್ಲಿ ವಿಳಂಬವಾಗುತ್ತಿದೆ ಎಂದು ಹೇಳಿದೆ. ಕಚ್ಚಾ ಸರಕುಗಳ ಬೆಲೆ ಏರಿಕೆ ಕಂಡಿರುವುದು ಉದ್ಯಮದ ಮೇಲೆ ಒತ್ತಡ ಹೆಚ್ಚಿಸುತ್ತಿದೆ ಎಂದೂ ತಿಳಿಸಿದೆ.

ತಯಾರಿಕಾ ವಲಯ ಡಿಸೆಂಬರ್‌ನಲ್ಲಿ ಉತ್ತಮ ಪ್ರಗತಿ ಸಾಧಿಸುವ ಮೂಲಕ 2017ನೇ ವರ್ಷ ಅಂತ್ಯವಾಗಿತ್ತು. ಡಿಸೆಂಬರ್‌ನಲ್ಲಿ 52.6 ರಿಂದ 54.7ಕ್ಕೆ ಏರಿಕೆ ಅಂದರೆ ಐದು ವರ್ಷಗಳಲ್ಲೇ ಗರಿಷ್ಠ ಮಟ್ಟಕ್ಕೆ ಏರಿಕೆ ಕಂಡಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry