ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧನಂಜಯ ಡಿಸಿಲ್ವಾ ಅಬ್ಬರದ ಶತಕ

ಬಾಂಗ್ಲಾದೇಶ ಎದುರಿನ ಮೊದಲ ಟೆಸ್ಟ್ ಪಂದ್ಯ
Last Updated 1 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಚಿತ್ತಗಾಂಗ್‌, ಬಾಂಗ್ಲಾದೇಶ : ಧನಂಜಯ ಡಿಸಿಲ್ವಾ (104) ಅವರ ಅಬ್ಬರದ ಶತಕದ ಬಲದಿಂದ ಶ್ರೀಲಂಕಾ ತಂಡ ಮೊದಲ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶ ತಂಡಕ್ಕೆ ತಿರುಗೇಟು ನೀಡುವಲ್ಲಿ ದಿಟ್ಟ ಹೆಜ್ಜೆ ಇಟ್ಟಿದೆ.

ಆತಿಥೇಯ ಬಾಂಗ್ಲಾದೇಶ ತಂಡ ಮೊದಲ ದಿನ ಬುಧವಾರ 90 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 374 ರನ್‌ ಕಲೆಹಾಕಿತ್ತು. ಗುರುವಾರ ಈ ತಂಡ 129.5 ಓವರ್‌ಗಳಲ್ಲಿ 513 ರನ್‌ ದಾಖಲಿಸಿ ಎಲ್ಲಾ ವಿಕೆಟ್ ಕಳೆದುಕೊಂಡಿತು. ಬಳಿಕ ಮೊದಲ ಇನಿಂಗ್ಸ್ ಆಡಿದ ಸಿಂಹಳೀಯ ನಾಡಿನ ಪಡೆ ದಿನದಾಟದ ಅಂತ್ಯಕ್ಕೆ 48 ಓವರ್‌ಗಳಲ್ಲಿ ಕೇವಲ ಒಂದು ವಿಕೆಟ್ ನಷ್ಟಕ್ಕೆ 187ರನ್‌ ಕಲೆಹಾಕಿದೆ.

ಡಿಸಿಲ್ವಾ ಅಬ್ಬರ: ದೊಡ್ಡ ಮೊತ್ತದ ಎದುರು ಉತ್ತಮ ಆರಂಭ ಪಡೆಯುವ ನಿರೀಕ್ಷೆಯಲ್ಲಿದ್ದ ಶ್ರೀಲಂಕಾ ಪಡೆ ಆರಂಭಿಕ ಆಘಾತ ಎದುರಿಸಿತು. ತಂಡ ಒಂದು ರನ್‌ ಗಳಿಸಿ ಖಾತೆ ತೆರೆದಿದ್ದ ವೇಳೆ ದಿಮುತ್‌ ಕರುಣಾರತ್ನೆ ವಿಕೆಟ್ ಒಪ್ಪಿಸಿದರು. ಮೆಹದಿ ಹಸನ್‌ ಮಿರಜ್ ಅವರ ಬೌಲಿಂಗ್‌ನಲ್ಲಿ ಕೆಟ್ಟ ಹೊಡೆತಕ್ಕೆ ಮುಂದಾದ ಕರುಣಾರತ್ನೆ ಅವರು ಇಮ್ರುಲ್‌ ಕಯಾಸ್‌ಗೆ ಕ್ಯಾಚ್ ನೀಡಿ ನಿರ್ಗಮಿಸಿದರು.

ಬಳಿಕ ಕ್ರೀಸ್‌ಗೆ ಬಂದ ಕುಶಾಲ್ ಮೆಂಡಿಸ್ (83, 152ಎ, 6ಬೌಂ, 1ಸಿ) ಹಾಗೂ ಧನಂಜಯ ಡಿಸಿಲ್ವಾ (104, 127 ಎ, 15ಬೌಂ ) ಒತ್ತಡಕ್ಕೆ ಒಳಗಾಗದೆ ಅಪೂರ್ವ ಇನಿಂಗ್ಸ್ ಕಟ್ಟಿದರು. ಎರಡನೇ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ ಈ ಜೋಡಿ 187ರನ್ ಕಲೆಹಾಕುವ ಮೂಲಕ ಭದ್ರ ಬುನಾದಿ ಹಾಕಿಕೊಟ್ಟಿದೆ.

ಮಹಮದುಲ್ಲಾ ಅರ್ಧಶತಕ: ಗುರುವಾರ ದೊಡ್ಡ ಮೊತ್ತ ಕಲೆಹಾಕುವ ಯೋಜನೆಯೊಂದಿಗೆ ಆಡಿದ ಬಾಂಗ್ಲಾದೇಶ ತಂಡ ಆರಂಭದಲ್ಲಿಯೇ ವಿಕೆಟ್ ಕಳೆದುಕೊಂಡಿತು. ತಂಡ ಕೇವಲ ಎರಡು ರನ್ ಸೇರಿಸುವಷ್ಟರಲ್ಲಿಯೇ ಮೊಮಿನುಲ್ ಹಕ್ (176) ವಿಕೆಟ್ ಒಪ್ಪಿಸಿದರು.

ನಾಯಕ ಮೊಹಮದುಲ್ಲಾ ಎರಡನೇ ದಿನ ಬಾಂಗ್ಲಾ ತಂಡಕ್ಕೆ ಆಸರೆಯಾದರು. 134 ಎಸೆತಗಳಲ್ಲಿ ಅವರು 83 ರನ್‌ ಕಲೆಹಾಕಿದರು. ಏಳು ಬೌಂಡರಿ ಹಾಗೂ ಎರಡು ಸಿಕ್ಸರ್‌ಗಳಿಂದ ಮಿಂಚು ಹರಿಸಿದರು ಅಲ್ಲದೇ ಅಜೇಯರಾಗಿ ಉಳಿದರು.

ಸಂಕ್ಷಿಪ್ತ ಸ್ಕೋರು: ಬಾಂಗ್ಲಾದೇಶ: (ಮೊದಲ ಇನಿಂಗ್ಸ್‌) 129.5 ಓವರ್‌ಗಳಲ್ಲಿ 513 (ಮೊಹಮದುಲ್ಲಾ ಅಜೇಯ 83, ಮೆಹದಿ ಹಸನ್ ಮಿರಜ್‌ 20; ಸುರಂಗಾ ಲಕ್ಮಲ್‌ 68ಕ್ಕೆ3, ರಂಗನಾ ಹೆರಾತ್‌ 150ಕ್ಕೆ3). ಶ್ರೀಲಂಕಾ: (ಮೊದಲ ಇನಿಂಗ್ಸ್): 48 ಓವರ್‌ಗಳಲ್ಲಿ 1 ವಿಕೆಟ್‌ಗೆ 187 (ದಿಮುತ್ ಕರುಣಾರತ್ನೆ 0, ಕುಶಾಲ್ ಮೆಂಡಿಸ್‌ 83 ಬ್ಯಾಟಿಂಗ್‌, ಧನಂಜಯ್ ಡಿಸಿಲ್ವಾ 104 ಬ್ಯಾಟಿಂಗ್‌).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT