‘ನಾನು ಹಿಂದೂ ವಿರೋಧಿ ಅಲ್ಲ’

7

‘ನಾನು ಹಿಂದೂ ವಿರೋಧಿ ಅಲ್ಲ’

Published:
Updated:
‘ನಾನು ಹಿಂದೂ ವಿರೋಧಿ ಅಲ್ಲ’

ಚೆನ್ನೈ: ‘ನಾನು ಹಿಂದೂ ವಿರೋಧಿಯಲ್ಲ ಅಥವಾ ಬೇರೆ ಧರ್ಮ, ವ್ಯಕ್ತಿಗಳ ವಿರೋಧಿಯಲ್ಲ’ ಎಂದು ಬಹುಭಾಷಾ ನಟ ಕಮಲ್‌ ಹಾಸನ್‌ ಹೇಳಿದ್ದಾರೆ. 2017ರ ನವೆಂಬರ್‌ನಲ್ಲಿ ನಿರ್ದಿಷ್ಟ  ವ್ಯಕ್ತಿಗಳನ್ನು ಉಲ್ಲೇಖಿಸದೇ ‘ಹಿಂದೂ ಭಯೋತ್ಪಾದಕರು’ ಎಂಬ ಪದ ಬಳಸಿ ಟೀಕೆಗೆ ಗುರಿಯಾಗಿದ್ದರು.

‘ನಾನು ಕೆಲವರನ್ನು ವಿರೋಧಿಸಿದರೆ, ಕೆಲವರ ಪರವಾಗಿ ಮಾತನಾಡಿದರೆ ನನ್ನನ್ನು ಹಿಂದೂ ವಿರೋಧಿ ಎಂದು ಕರೆಯುತ್ತಾರೆ’ ಎಂದು ತಮಿಳು ವಾರಪತ್ರಿಕೆ ‘ಅನಂದ ವಿಕಟನ್’ಗೆ ಬರೆಯುವ ರಾಜಕೀಯ ಅಂಕಣದಲ್ಲಿ ಉಲ್ಲೇಖಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry