ಮಂಗಳವಾರ, ಡಿಸೆಂಬರ್ 10, 2019
20 °C

ವೀರಭದ್ರ ಸಿಂಗ್‌ ವಿರುದ್ಧ ಸಿಬಿಐ ಆರೋಪ ಪಟ್ಟಿ

ಪಿಟಿಐ Updated:

ಅಕ್ಷರ ಗಾತ್ರ : | |

ವೀರಭದ್ರ ಸಿಂಗ್‌ ವಿರುದ್ಧ  ಸಿಬಿಐ ಆರೋಪ ಪಟ್ಟಿ

ನವದೆಹಲಿ: ‌ಹಣ ಅಕ್ರಮ ವರ್ಗಾವಣೆ ಆರೋಪದ ಮೇಲೆ ಹಿಮಾಚಲ ಪ್ರದೇಶದ ಮಾಜಿ ಮುಖ್ಯಮಂತ್ರಿ ವೀರಭದ್ರ ಸಿಂಗ್‌ ಹಾಗೂ ಅವರ ಪತ್ನಿ ಪ್ರತಿಭಾ ಸಿಂಗ್‌ ಅವರ ವಿರುದ್ಧ ದೆಹಲಿ ನ್ಯಾಯಾಲಯಕ್ಕೆ ಜಾರಿ ನಿರ್ದೇಶನಾಲಯ ಆರೋಪ ಪಟ್ಟಿ ಸಲ್ಲಿಸಿದೆ.

ವಿಶೇಷ ನ್ಯಾಯಮೂರ್ತಿ ಸಂತೋಷ್‌ ಸ್ನೇಹಿ ಮಾನ್‌ ಅವರ ಎದುರು ಆರೋಪ ಪಟ್ಟಿ ಸಲ್ಲಿಸಿದ್ದು, ನ್ಯಾಯಾಲಯ ಈ ತಿಂಗಳ 12 ಕ್ಕೆ ವಿಚಾರಣೆಯನ್ನು ಕೈಗೆತ್ತುಗಳ್ಳಲಿದೆ.

ವೀರಭದ್ರ ಸಿಂಗ್‌ ಹಾಗೂ ಅವರ ಪತ್ನಿ ಸೇರಿದಂತೆ, ಯುನಿವರ್ಸಲ್‌ ಆ್ಯಪಲ್‌ ಅಸೋಸಿಯೇಟ್‌ ಮಾಲೀಕ ಚುನ್ನಿ ಲಾಲ್‌ ಚೌಹಾಣ್‌, ಜೀವ ವಿಮಾ ನಿಗಮದ ಏಜೆಂಟ್‌ ಆನಂದ್‌ ಚೌಹಾಣ್‌, ಪ್ರೇಮ್‌ ರಾಜ್‌ ಮತ್ತು ಲಾವನ್ ಕುಮಾರ್‌ ರೌಚ್‌ ವಿರುದ್ಧ ಆರೋಪ ಪಟ್ಟಿ ಸಲ್ಲಿಸಲಾಗಿದೆ.

ಸುಮಾರು ₹10 ಕೋಟಿ ಮೊತ್ತದ ಆಸ್ತಿಯನ್ನು ಅವರು ಹೊಂದಿದ್ದಾರೆ. ಇದು ಅವರು ಕೇಂದ್ರ ಮಂತ್ರಿಯಾಗಿದ್ದಾಗಿನ ಆದಾಯಕ್ಕೆ ಸಮನಾಗಿಲ್ಲ ಎಂದು ಸಿಬಿಐ ಹೇಳಿದೆ.

ವೀರಭದ್ರ ಸಿಂಗ್‌ ಹಾಗೂ ಅವರ ಪತ್ನಿಯನ್ನು ಈ ವರೆಗೂ ಬಂಧಿಸಿಲ್ಲ.

ಪ್ರತಿಕ್ರಿಯಿಸಿ (+)