ಬಡವನಿಗೂ ‘ಉಡಾನ್’ ಭಾಗ್ಯ

7
ಟ್ರಿಪ್‌ಗಳ ಸಂಖ್ಯೆ ಹೆಚ್ಚಿಸಲಿದೆ ‘ನಭ್ ನಿರ್ಮಾಣ’

ಬಡವನಿಗೂ ‘ಉಡಾನ್’ ಭಾಗ್ಯ

Published:
Updated:
ಬಡವನಿಗೂ ‘ಉಡಾನ್’ ಭಾಗ್ಯ

ವಿಮಾನ ಟ್ರಿಪ್‌ಗಳ ಸಂಖ್ಯೆಯನ್ನು ವಾರ್ಷಿಕ ನೂರು ಕೋಟಿಗೆ ಏರಿಸುವ ಮಹತ್ವಾಕಾಂಕ್ಷಿ ‘ನಭ್ ನಿರ್ಮಾಣ್’ ಯೋಜನೆಯನ್ನು ಘೋಷಿಸಲಾಗಿದೆ. ಇದಕ್ಕಾಗಿ ₹ 4,469 ಕೋಟಿ ಅನುದಾನ ಇರಿಸಲಾಗಿದೆ.

ವಿಮಾನ ನಿಲ್ದಾಣಗಳ ಸಾಮರ್ಥ್ಯವನ್ನು ಐದು ಪಟ್ಟು ಹೆಚ್ಚಿಸುವುದು, ಸದ್ಯ ಬಳಸಿಕೊಳ್ಳುತ್ತಿಲ್ಲದ ಸುಮಾರು 56 ನಿಲ್ದಾಣಗಳು ಹಾಗೂ 31 ಹೆಲಿಪ್ಯಾಡ್‌ಗಳನ್ನು ಉಡಾನ್ ಯೋಜನೆ ಅಡಿ ಸೇವೆಗೆ ಬಳಸಿಕೊಳ್ಳುವುದೂ ಇದರಲ್ಲಿ ಸೇರಿವೆ.

ಮೂರು ವರ್ಷಗಳಲ್ಲಿ ವಿಮಾನ ಪ್ರಯಾಣಿಕರ ಸಂಖ್ಯೆ ಶೇ 18ರಷ್ಟು ಏರಿಕೆ ಕಂಡಿದೆ. 900 ವಿಮಾನಗಳನ್ನು ಖರೀದಿಸಲಾಗುತ್ತಿದೆ. ಸಾರ್ವಜನಿಕ ಉದ್ದಿಮೆಗಳಲ್ಲಿ ಹೂಡಿಕೆ ಮಾಡುವ ನಿರ್ಧಾರದಿಂದಾಗಿ ಏರ್ ಇಂಡಿಯಾ ₹ 1,156 ಕೋಟಿ ಬಂಡವಾಳ ಪಡೆಯಲಿದೆ.

‘ಹಲವು ಯೋಜನೆಗಳ ಪರಿಣಾಮವಾಗಿ ಕೈಗೆಟಕುವ ದರದಲ್ಲಿ ವಿಮಾನ ಪ್ರಯಾಣ ಲಭ್ಯವಾಗುತ್ತಿದ್ದು, ಹವಾಯಿ ಚಪ್ಪಲಿ ಧರಿಸುವ ಬಡವನೂ ಹವಾಯಿ ಜಹಾಜ್‌ನಲ್ಲಿ (ವಿಮಾನ) ಓಡಾಡುವಂತಾಗಿದೆ’ ಎಂದು ಸಚಿವರು ಹೇಳಿದರು.

ವಿವಿಐಪಿಗಳಿಗೆ 2 ವಿಮಾನ: ವಿವಿಐಪಿಗಳ ಬಳಕೆಗಾಗಿ ಎರಡು ವಿಮಾನಗಳನ್ನು ಖರೀದಿಸುವುದೂ ಸೇರಿದಂತೆ ನಾಗರಿಕ ವಿಮಾನಯಾನ ಇಲಾಖೆಗೆ ಒಟ್ಟು ₹ 6,602.86 ಕೋಟಿ ಅನುದಾನ ಘೋಷಿಸಲಾಗಿದೆ. ಇದು ಪ್ರಸಕ್ತ ಆರ್ಥಿಕ ವರ್ಷಕ್ಕಿಂತ ಮೂರು ಪಟ್ಟು ಹೆಚ್ಚು. ಇದರಲ್ಲಿ 2 ವಿಮಾನಗಳ ಖರೀದಿ ಮತ್ತು ನಿರ್ವಹಣೆಗೆ ₹ 4,469.50 ಕೋಟಿ ವ್ಯಯವಾಗಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry