ಭಾನುವಾರ, ಡಿಸೆಂಬರ್ 8, 2019
25 °C

ಮಹಾತ್ಮ ಗಾಂಧಿ 150ನೇ ಜನ್ಮದಿನಾಚರಣೆಗೆ ₹150 ಕೋಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಹಾತ್ಮ ಗಾಂಧಿ 150ನೇ ಜನ್ಮದಿನಾಚರಣೆಗೆ ₹150 ಕೋಟಿ

ನವದೆಹಲಿ: 2019ರಿಂದ ಅಕ್ಟೋಬರ್ 2ರಿಂದ 2020 ಅಕ್ಟೋಬರ್‌ 2ರವರಗೆ ಮಹಾತ್ಮ ಗಾಂಧಿ ಅವರ 150ನೇ ಜನ್ಮದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲು ₹150 ಕೋಟಿ ಮೀಸಲಿಡಲಾಗಿದೆ.

ಮಹಾತ್ಮ ಗಾಂಧಿ ನೆನಪಿನ ಕಾರ್ಯಕ್ರಮಗಳನ್ನು ದೇಶದಾದ್ಯಂತ ನಡೆಸುವ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ 116 ಸದಸ್ಯರಿರುವ ಸಮಿತಿ ರಚಿಸಲಾಗುವುದು. ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು, ಗಾಂಧಿ ಅನುಯಾಯಿಗಳು, ಎಲ್ಲಾ ಕ್ಷೇತ್ರಗಳ ಪ್ರಸಿದ್ಧ ವ್ಯಕ್ತಿಗಳು ಸಮಿತಿಯಲ್ಲಿರುತ್ತಾರೆ ಎಂದು  ಜೇಟ್ಲಿ ತಿಳಿಸಿದ್ದಾರೆ.

ಒಂಬತ್ತು ಮಂದಿ ವಿದೇಶಿ ಪ್ರತಿನಿಧಿಗಳು ಸಮಿತಿಯಲ್ಲಿ ಇರಲಿದ್ದಾರೆ. ವಿಶ್ವಸಂಸ್ಥೆಯ ಮಾಜಿ ಪ್ರಧಾನ ಕಾರ್ಯದರ್ಶಿ ಕೋಫಿ ಅನ್ನನ್‌ ಮತ್ತು ಬಾನ್‌– ಕಿ –ಮೂನ್‌, ಜಪಾನ್‌ ಪ್ರಧಾನಿ ಯೋಶಿರೊ ಮೊರಿ ಮತ್ತು ಮೋರ್ಚುಗಲ್‌ ಪ್ರಧಾನಿ ಆ್ಯಂಟನಿಯೊ ಕೋಸ್ತ ಅವರನ್ನು ಸಮಿತಿಯಲ್ಲಿ ಇರಲಿದ್ದಾರೆ ಎಂದು ಜೇಟ್ಲಿ ತಿಳಿಸಿದರು.

 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು