ಶುಕ್ರವಾರ, ಡಿಸೆಂಬರ್ 13, 2019
27 °C

ನೀರಾವರಿಗೆ ₹2600 ಕೋಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನೀರಾವರಿಗೆ ₹2600 ಕೋಟಿ

ಭೂಗರ್ಭ ನೀರಾವರಿ ಯೋಜನೆ ‘ಕೃಷಿ ಸಿಂಚಯ್‌ ಯೋಜನೆ’ಯಡಿ 96 ನೀರಾವರಿ ವಂಚಿತ ಜಿಲ್ಲೆಗಳಲ್ಲಿ ನೀರಾವರಿ ಒದಗಿಸಲು ₹26 ಸಾವಿರ ಕೋಟಿ ಮೀಸಲಿಡಲಾಗಿದೆ.

ಶೇಕಡ 30ಕ್ಕಿಂತಲೂ ಕಡಿಮೆ ನೀರಾವರಿ ಇರುವ ಪ್ರದೇಶಗಳು ಈ ಯೋಜನೆಯಡಿ ಬರಲಿವೆ. ಮುಂದಿನ ವರ್ಷ  ಗ್ರಾಮೀಣ ಪ್ರದೇಶದ ಜನರಿಗೆ ಗರಿಷ್ಠ ಜೀವನೋಪಾಯ ಅವಕಾಶಗಳನ್ನು ಒದಗಿಸುವ ಗುರಿ ಹೊಂದಲಾಗಿದೆ. ಕೃಷಿ ಮತ್ತು ಕೃಷಿ ಸಂಬಂಧಿ ಚಟುವಟಿಕೆಗಳು ಹೆಚ್ಚು ಇರುವ ಪ್ರದೇಶಗಳ ಮೂಲಸೌಕರ್ಯ ಅಭಿವೃದ್ಧಿಪಡಿಸಲಾಗುವುದು.

2018–19ರಲ್ಲಿ ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಸೃಷ್ಟಿ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ವಿವಿಧ ಇಲಾಖೆಗಳ ಮೂಲಕ  ₹14.34 ಲಕ್ಷ ಕೋಟಿ, ಬಜೆಟ್‌ ಹೊರತಾದ ಸಂಪನ್ಮೂಲಗಳಿಂದ ಮತ್ತು ಹೆಚ್ಚುವರಿಯಾಗಿ  ₹11.98 ಲಕ್ಷ ಕೋಟಿ ವಿನಿಯೋಗಿಸಲಾಗುವುದು. ಕೃಷಿ ಚಟುಚಟಿಕೆ ಮತ್ತು ಸ್ವ ಉದ್ಯೋಗ ಹೊರತಾಗಿಯೂ ಈ ಯೋಜನೆಯಡಿ 321 ಕೋಟಿ ಜನರಿಗೆ ಉದ್ಯೋಗ ಸೃಷ್ಟಿಸಲಿದೆ.

ಗ್ರಾಮೀಣ ಪ್ರದೇಶದಲ್ಲಿ 3.17 ಲಕ್ಷ ಕಿ.ಮೀಟರ್‌ ರಸ್ತೆಗಳು, 51 ಲಕ್ಷ ಮನೆಗಳು, 1.88 ಕೋಟಿ ಶೌಚಾಲಯ, 1.75 ಕೋಟಿ ಗೃಹಬಳಕೆ ವಿದ್ಯುತ್‌ ಸಂಪರ್ಕ ಇವೆಲ್ಲವೂ ಕೃಷಿ ಚಟುವಟಿಕೆಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಜಾರಿಗೊಳಿಸಲಾಗುತ್ತಿದೆ.

ಪ್ರತಿಕ್ರಿಯಿಸಿ (+)