ಬುಧವಾರ, ಡಿಸೆಂಬರ್ 11, 2019
16 °C

ದಿನೇಶ್ ಮಹೇಶ್ವರಿ ರಾಜ್ಯ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಿನೇಶ್ ಮಹೇಶ್ವರಿ ರಾಜ್ಯ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ

ನವದೆಹಲಿ: ಮೇಘಾಲಯ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿರುವ ದಿನೇಶ್ ಮಹೇಶ್ವರಿ ಅವರನ್ನು ರಾಜ್ಯ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯನ್ನಾಗಿ ಸುಪ್ರೀಂ ಕೋರ್ಟ್‌ನ ಕೊಲಿಜಿಯಂ ಗುರುವಾರ ನೇಮಕಗೊಳಿಸಿದೆ.

ನ್ಯಾಯಮೂರ್ತಿ ಎಸ್‌.ಕೆ. ಮುಖರ್ಜಿ ಅವರ ನಿವೃತ್ತಿಯಿಂದ ಕಳೆದ ಅಕ್ಟೋಬರ್‌ 9ರಿಂದ ಖಾಲಿ ಇರುವ ಮುಖ್ಯ ನ್ಯಾಯಮೂರ್ತಿ ಸ್ಥಾನದಲ್ಲಿ ನ್ಯಾಯಮೂರ್ತಿ ಎಚ್.ಜಿ. ರಮೇಶ್‌ ಪ್ರಭಾರ ಸೇವೆಯಲ್ಲಿದ್ದಾರೆ.

ಅಖಿಲ ಭಾರತ ಹೈಕೋರ್ಟ್ ನ್ಯಾಯಾಧೀಶರ ಸೇವಾ ಹಿರಿತನದಲ್ಲಿ ನ್ಯಾಯಮೂರ್ತಿ ಎಚ್‌.ಜಿ. ರಮೇಶ ಅವರಿಗಿಂತಲೂ ಕಿರಿಯರಾಗಿರುವ ದಿನೇಶ್‌ ಮಹೇಶ್ವರಿ ಅವರ ಹೆಸರನ್ನುಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ಐವರು ಸದಸ್ಯರ ಕೊಲಿಜಿಯಂ ಜನವರಿ 10ರಂದು ಶಿಫಾರಸು ಮಾಡಿತ್ತು.

ನ್ಯಾಯಮೂರ್ತಿ ಎಚ್‌.ಜಿ. ರಮೇಶ್‌ ಅವರು ಈ ಹಿಂದೆ ಮುಖ್ಯ ನ್ಯಾಯಮೂರ್ತಿ ಸ್ಥಾನವನ್ನು ನಿರಾಕರಿಸಿದ್ದರಿಂದ ಸೇವೆಯಲ್ಲಿ ಕಿರಿಯರಾದವರನ್ನೇ ನೇಮಕಗೊಳಿಸಲಾಗಿದೆ.

ದಿನೇಶ್‌ ಮಹೇಶ್ವರಿ ಅವರು, 2016ರ ಫೆಬ್ರುವರಿ 24ರಂದು ಮೇಘಾಲಯ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣ ವಚನ

ಸ್ವೀಕರಿಸಿದ್ದರು.

ಪ್ರತಿಕ್ರಿಯಿಸಿ (+)