ನೆಟ್‌ಬಾಲ್‌: ಸೆಮಿಫೈನಲ್‌ಗೆ ಕರ್ನಾಟಕ

7

ನೆಟ್‌ಬಾಲ್‌: ಸೆಮಿಫೈನಲ್‌ಗೆ ಕರ್ನಾಟಕ

Published:
Updated:

ಬೆಂಗಳೂರು: ಕರ್ನಾಟಕ ಬಾಲಕರ ತಂಡ ಬಿಹಾರದಲ್ಲಿ ನಡೆಯುತ್ತಿರುವ 23ನೇ ಸಬ್‌ಜೂನಿಯರ್ ರಾಷ್ಟ್ರೀಯ ನೆಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಗುರುವಾರ ಸೆಮಿಫೈನಲ್ ತಲುಪಿದೆ.

ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡ 25–24ರಲ್ಲಿ ಉತ್ತರ ಪ್ರದೇಶ ಎದುರು ಗೆದ್ದಿದೆ. ಸೆಮಿಫೈನಲ್‌ ಪೈಪೋಟಿಯಲ್ಲಿ ಪಶ್ಚಿಮ ಬಂಗಾಳ ಎದುರು ಆಡಲಿದೆ. ಪ್ರೀ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ರಾಜ್ಯ ತಂಡ 31–15ರಲ್ಲಿ ಮಧ್ಯಪ್ರದೇಶ ವಿರುದ್ಧ ಜಯದಾಖಲಿಸಿತ್ತು.

ಬಾಲಕಿಯರ ವಿಭಾಗದಲ್ಲಿ ಕರ್ನಾಟಕ ತಂಡ 25–10ರಲ್ಲಿ ದೆಹಲಿ ಎದುರು ಗೆದ್ದು ಸೆಮಿಫೈನಲ್‌ ಪ್ರವೇಶಿಸಿದೆ. ಮುಂದಿನ ಪಂದ್ಯವನ್ನು ಗುಜರಾತ್ ವಿರುದ್ಧ ಆಡಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry