4

ಶುಲ್ಕ ಪಾವತಿಸಿಲ್ಲವೆಂದು ಸಹಪಾಠಿಗಳ ಎದುರು ಶಾಲಾ ಆಡಳಿತವರ್ಗದಿಂದ ನಿಂದನೆ: ವಿದ್ಯಾರ್ಥಿನಿ ಆತ್ಮಹತ್ಯೆ

Published:
Updated:
ಶುಲ್ಕ ಪಾವತಿಸಿಲ್ಲವೆಂದು ಸಹಪಾಠಿಗಳ ಎದುರು ಶಾಲಾ ಆಡಳಿತವರ್ಗದಿಂದ ನಿಂದನೆ: ವಿದ್ಯಾರ್ಥಿನಿ ಆತ್ಮಹತ್ಯೆ

ಹೈದರಾಬಾದ್‌: ಶಾಲಾ ಶುಲ್ಕ ಪಾವತಿಸಿಲ್ಲವೆಂದು ಸಹಪಾಠಿಗಳ ಎದುರು ಶಾಲಾ ಸಿಬ್ಬಂದಿ ಅವಹೇಳನ ಮಾಡಿದ್ದು, ಇದರಿಂದ ಬೇಸತ್ತ ವಿದ್ಯಾರ್ಥಿನಿ ಗುರುವಾರ ರಾತ್ರಿ ಮನೆಯಲ್ಲಿ ‘ಡೆತ್‌ ನೋಟ್‌’ ಬರೆದಿಟ್ಟು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ವಿದ್ಯಾರ್ಥಿನಿ ಒಂಬತ್ತನೆ ತರಗತಿಯ ವ್ಯಾಸಂಗ ಮಾಡುತ್ತಿದ್ದು, ಶಾಲಾ ಶುಲ್ಕ ಪಾವತಿಸದ ಕಾರಣ ಪರೀಕ್ಷೆ ಬರೆಯಲು ಖಾಸಗಿ ಶಾಲಾ ಆಡಳಿತ ಮಂಡಳಿ ನಿರಾಕರಿಸಿದರು. ಇದರಿಂದ ಬೆಸತ್ತ ವಿದ್ಯಾರ್ಥಿನಿ ‘ಅಮ್ಮಾ, ನನ್ನನ್ನು ಕ್ಷಮಿಸು’ ಎಂದು ಪತ್ರ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಶಾಲಾ ಆಡಳಿತವರ್ಗ ತರಗತಿಯಲ್ಲಿ ಎಲ್ಲ ವಿದ್ಯಾರ್ಥಿಗಳ ಎದುರು ನನ್ನ ಹೆಸರನ್ನು ಕರೆದು ತರಗತಿಯಿಂದ ಹೊರ ಹಾಕಿದರು ಎಂದು ನೊಂದ ವಿದ್ಯಾರ್ಥಿನಿ ಶಾಲೆಯಲ್ಲಿ ನಡೆದ ಘಟನೆಯನ್ನು ಸಹೋದರಿಯೊಂದಿಗೆ ಹಂಚಿಕೊಂಡಿದ್ದಳು.

ಈ ಘಟನೆ ಮಾಲ್ಕಜ್‌ಗಿರಿಯಲ್ಲಿ ನಡೆದಿದ್ದು, ಪೋಷಕರು ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry