‘ಶೋಷಿತ ವರ್ಗಗಳ ಅಭಿವೃದ್ಧಿಗೆ ಸರ್ಕಾರಗಳ ಪಾತ್ರ ಮುಖ್ಯ’

7

‘ಶೋಷಿತ ವರ್ಗಗಳ ಅಭಿವೃದ್ಧಿಗೆ ಸರ್ಕಾರಗಳ ಪಾತ್ರ ಮುಖ್ಯ’

Published:
Updated:

ದೇವದುರ್ಗ: ‘ಬಸವಣ್ಣನವರ ಕಾಲದಿಂದಲೂ ಸಮಾಜದಲ್ಲಿ ಶೋಷಿತಗೊಂಡಿರುವ ಹಲವು ವರ್ಗಗಳಿಗೆ ಇಂದಿಗೂ ನ್ಯಾಯ ದೊರಕಿಲ್ಲ. ಸರ್ಕಾರಗಳು ಈ ಬಗ್ಗೆ ಇನ್ನಷ್ಟು ಗಂಭೀರವಾಗಿ ಯೋಚಿಸುವ ಅಗತ್ಯವಿದೆ’ ಎಂದು ಶಾಸಕ ಕೆ. ಶಿವನಗೌಡ ನಾಯಕ ಹೇಳಿದರು.

ಪಟ್ಟಣದ ಸಾರ್ವಜನಿಕ ಕ್ಲಬ್‌ ಮೈದಾನದಲ್ಲಿ ಗುರುವಾರ ತಾಲ್ಲೂಕು ಆಡಳಿತದ ವತಿಯಿಂದ ಏರ್ಪಡಿಸಿದ್ದ ಮಡಿವಾಳ ಮಾಚಿದೇವರ ಜಯಂತಿಯಲ್ಲಿ ಅವರು ಮಾತನಾಡಿದರು.

‘ಸಮಾಜದಲ್ಲಿ ಸ್ವಾಭಿಮಾನದಿಂದ ಬದುಕುತ್ತಿರುವ ಎಷ್ಟೋ ಹಿಂದುಳಿದ ಜನಾಂಗಗಳು ಮುಖ್ಯವಾಹಿನಿಗೆ ಬಂದಿಲ್ಲ. ಇವರನ್ನು ಗುರುತಿಸಿ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯವಾಗಿ ಮುಂದೆ ಬರಲು ಎಲ್ಲ ಸೌಲಭ್ಯಗಳ ಅಗತ್ಯತೆ ಈ ವರ್ಗದ ಜನರಿಗೆ ಇದೆ’ ಎಂದರು.

ಇದಕ್ಕೂ ಮೊದಲು ತಹಶೀಲ್ದಾರ್‌ ಶಿವಶರಣಪ್ಪ ಕಟ್ಟೋಳಿ ಅವರು ತಾಲ್ಲೂಕು ಪಂಚಾಯಿತಿ ಅವರಣದಲ್ಲಿ ಮಡಿವಾಳ ಮಾಚಿದೇವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ನಂತರ ಮೆರವಣಿಗೆಗೆ ಚಾಲನೆ ನೀಡಿದರು. ಉಪನ್ಯಾಸಕ ಖಾಸೀ ಅಲಿ ಹುಜರಾತಿ ಉಪನ್ಯಾಸ ನೀಡಿದರು. ಬಿಜೆಪಿ ಪಕ್ಷದ ಮುಖಂಡರು ಮತ್ತು ಅಧಿಕಾರಿಗಳು ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry