ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇತ್ರಾಣಿ ಗುಡ್ಡಕ್ಕೆ ಪ್ರವಾಸಿಗರ ದಂಡು

Last Updated 2 ಫೆಬ್ರುವರಿ 2018, 8:41 IST
ಅಕ್ಷರ ಗಾತ್ರ

ಭಟ್ಕಳ: ಮೀನುಗಾರಿಕಾ ಬೋಟ್ ಯೂನಿಯನ್‌ ಗುರುವಾರ ಏರ್ಪಡಿಸಿದ್ದ ಉಚಿತ ನೇತ್ರಾಣಿ ಪ್ರವಾಸಕ್ಕೆ ಸಾವಿರಾರು ಜನರು ಬೋಟ್‌ಗಳ ಮೂಲಕ ನೇತ್ರಾಣಿ ಗುಡ್ಡಕ್ಕೆ ತೆರಳಿ ಅಲ್ಲಿನ ನೈಸರ್ಗಿಕ ಸೌಂದರ್ಯ ಸವಿದರು.

ಬೆಳಿಗ್ಗೆ 7ಗಂಟೆ ಸುಮಾರಿಗೆ 15ಕ್ಕೂ ಹೆಚ್ಚು ಮೀನುಗಾರಿಕಾ ಬೋಟ್‌ಗಳ ಮೂಲಕ ನೇತ್ರಾಣಿ ಗುಡ್ಡಕ್ಕೆ ಬಂದ ಸಾವಿರಾರು ಪ್ರವಾಸಿಗರು, ಗುಡ್ಡದ ಪ್ರಕೃತಿ ಸೌಂದರ್ಯ ಸವಿದರು. ಗುಡ್ಡದಲ್ಲಿನ ಪ್ರಾಣಿ– ಪಕ್ಷಿಗಳನ್ನು ಕಂಡು ಪುಳಕಗೊಂಡು, ಅವುಗಳೊಂದಿಗೆ ಆಡಿ, ಕುಣಿದು ಕುಪ್ಪಳಿಸಿದರು. ನಂತರ ಗುಡ್ಡದಲ್ಲಿದ್ದ ನೇತ್ರಾಣಿ ಜಟಕ ಸೇರಿದಂತೆ ಅಲ್ಲಿದ್ದ ದೇವರುಗಳಿಗೆ ವಿಶೇಷ ಪೂಜೆ ಸಲ್ಲಿಸಿ, ಭೋಜನ, ಉಪಹಾರ ಸವಿದು ಮಧ್ಯಾಹ್ನದ ವೇಳೆಗೆ ಅದೇ ಬೋಟ್‌ಗಳ ಮೂಲಕ ಹಿಂತಿರುಗಿದರು.

‘ಯೂನಿಯನ್‌ನವರು ನೇತ್ರಾಣಿ ಗುಡ್ಡಕ್ಕೆ ಉಚಿತವಾಗಿ ಪ್ರವಾಸ ಏರ್ಪಡಿಸುವ ಮೂಲಕ ಇಲ್ಲಿನ ಪ್ರಕೃತಿ ಸೌಂದರ್ಯ ಸವಿಯಲು ಅನುವು ಮಾಡಿಕೊಟ್ಟಿದೆ’ ಎಂದು ನೇತ್ರಾಣಿಗೆ ತೆರಳಿದ್ದ ಪ್ರವಾಸಿಗರಲ್ಲೊಬ್ಬರಾದ ಜಾಲಿ ಯುವಕ ಮಂಡಳದ ಕಾರ್ಯದರ್ಶಿ ಹರೀಶ ನಾಯ್ಕ ಅಭಿಪ್ರಾಯ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT