ಗುರುವಾರ , ಡಿಸೆಂಬರ್ 12, 2019
25 °C

ಕಡೂರಿನಲ್ಲಿ ರಾಗಿ ಖರೀದಿ ಕೇಂದ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಡೂರಿನಲ್ಲಿ ರಾಗಿ ಖರೀದಿ ಕೇಂದ್ರ

ಕಡೂರು: ರಾಗಿ ಖರೀದಿ ಕೇಂದ್ರವನ್ನು ಕಡೂರಿನಲ್ಲಿ ಆರಂಭಿಸಲಾಗಿದ್ದು, ಇದರ ಸದುಪಯೋಗವನ್ನು ಪಡೆದು ಕೊಳ್ಳಬೇಕೆಂದು ಶಾಸಕ ವೈ.ಎಸ್.ವಿ. ದತ್ತ ಸಲಹೆ ನೀಡಿದರು.

ಗುರುವಾರ ಕಡೂರಿನ ಎಪಿಎಂಸಿ ಆವರಣದಲ್ಲಿ ರಾಜ್ಯ ಉಗ್ರಾಣದ ನಿಗಮದಿಂದ ಆರಂಭಿಸಲಾಗಿರುವ ರಾಗಿ ಖರೀದಿ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸರ್ಕಾರ ರಾಗಿಯನ್ನು ನೇರವಾಗಿ ರೈತರಿಂದಲೇ ಖರೀದಿಸಲು ನಿರ್ಧರಿಸಿ ಪ್ರತಿ ತಾಲ್ಲೂಕಿನಲ್ಲೂ ಖರೀದಿ ಕೇಂದ್ರವನ್ನು ಆರಂಭಿಸಿದೆ. ಒಟ್ಟು 1 ಕಿಂಟಲ್‌ಗೆ ₹2300 ರೂಪಾಯಿ ನಿಗದಿಪಡಿಸಿದ್ದು, ಕೇಂದ್ರ ₹1,900 ಮತ್ತು ರಾಜ್ಯ ಸರ್ಕಾರ ₹400ಗಳನ್ನು ನೀಡುತ್ತಿದೆ, ಈ ಖರೀದಿ ಕೇಂದ್ರದಿಂದ ರೈತರು ಬೆಳೆದ ರಾಗಿಗೆ ಉತ್ತಮ ಬೆಲೆ ದೊರಕುವಂತಾಗಿದೆ ಎಂದರು.

ಎಪಿಎಂಸಿ ಅಧ್ಯಕ್ಷ ಆರ್. ಒಂಕಾರಪ್ಪ ಮಾತನಾಡಿ, ‘ರಾಗಿ ಖರೀದಿ ಕೇಂದ್ರದಲ್ಲಿ ಯಾವುದೇ ರೀತಿ ಹಮಾಲಿ ವೆಚ್ಚ ಮತ್ತು ಕಮೀಷನ್ ಇರುವುದಿಲ್ಲ. ರೈತರು ಪಹಣಿ ಮುಂತಾದ ಸೂಕ್ತ ದಾಖಲೆಗಳನ್ನು ನೀಡಿ ಈ ಕೇಂದ್ರದ ಸದುಪಯೋಗ ಪಡೆದುಕೊಳ್ಳಬಹುದು’ ಎಂದರು.

ಹಮಾಲಿ ಸಂಘದ ಮಾಜಿ ಅಧ್ಯಕ್ಷ ಚಂದ್ರಪ್ಪ ಮಾತನಾಡಿ, ‘50 ಕೆ.ಜಿ. ತೂಕದ ಒಂದು ಚೀಲವನ್ನು 18 ಅಡಿಗೂ ಹೆಚ್ಚು ಎತ್ತರಕ್ಕೆ ಹೊರಬೇಕಾದ ಹಮಾಲಿಗಳಿಗೆ ಕೇವಲ ₹5 ನೀಡುತ್ತಾರೆ. ಇದನ್ನು ಹೆಚ್ಚಿಸಲು ಕ್ರಮಕೈಗೊಳ್ಳಬೇ

ಪ್ರತಿಕ್ರಿಯಿಸಿ (+)