ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಫೋನ್ 8 ಆರ್ಡರ್ ಮಾಡಿದರೆ ಸಿಕ್ಕಿದ್ದು ಬಟ್ಟೆ ಒಗೆಯುವ ಸೋಪ್!

Last Updated 2 ಫೆಬ್ರುವರಿ 2018, 9:56 IST
ಅಕ್ಷರ ಗಾತ್ರ

ಮುಂಬೈ: ಫ್ಲಿಪ್‍ಕಾರ್ಟ್ ಮೂಲಕ ಐಫೋನ್ 8 ಆರ್ಡರ್ ಮಾಡಿದರೆ ತನಗೆ ಸಿಕ್ಕಿದ್ದು ಬಟ್ಟೆ ಒಗೆಯುವ ಸೋಪ್ ಎಂದು 26ರ ಹರೆಯದ ಸಾಫ್ಟ್‌ವೇರ್‌ ಎಂಜಿನಿಯರ್‌ ದೂರು ನೀಡಿದ್ದಾರೆ.

ಐಫೋನ್‍ 8 ಆರ್ಡರ್ ಮಾಡಿದಾಗಲೇ ಅದರ ಬೆಲೆಯನ್ನೂ ಪಾವತಿಸಲಾಗಿತ್ತು ಎಂದು ಸಾಫ್ಟ್‌ವೇರ್‌ ಎಂಜಿನಿಯರ್ ತಬರೇಜ್ ಮೆಹಬೂಬ್ ನಾಗ್ರಳ್ಳಿ ಎಂಬವರು ಸೆಂಟ್ರಲ್ ಮುಂಬೈನ ಬೈಕುಲ್ಲಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಫ್ಲಿಫ್‍ಕಾರ್ಟ್ ಮೂಲಕ ಐಫೋನ್ 8 ಖರೀದಿಸಲು ಅವರು ₹55,000 ಪಾವತಿ ಮಾಡಿದ್ದರು.

ಜನವರಿ 22 ರಂದು ನವಿ ಮುಂಬೈ ಪನ್ವೇಲ್‍ನಲ್ಲಿರುವ ನನ್ನ ಮನೆ ವಿಳಾಸಕ್ಕೆ ಪಾರ್ಸೆಲ್ ಬಂದಿತ್ತು. ಅದನ್ನು ತೆರೆದು ನೋಡಿದಾಗ ಅದರೊಳಗೆ ಮೊಬೈಲ್ ಫೋನ್ ಬದಲು ಬಟ್ಟೆ ಒಗೆಯುವ ಸೋಪ್ ಇತ್ತು ಎಂದು ತಬರೇಜ್ ಹೇಳಿದ್ದಾರೆ.

ತಬರೇಜ್ ಅವರು ನಮ್ಮ ಠಾಣೆಯಲ್ಲಿ ಫ್ಲಿಫ್‍ಕಾರ್ಟ್ ವಿರುದ್ಧ ದೂರು ನೀಡಿದ್ದಾರೆ ಎಂದು ಬೈಕುಲ್ಲಾ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಅಧಿಕಾರಿ ಅವಿನಾಶ್ ಶಿಂಟ್ಗೆ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT