‘ರಾಜಯೋಗ ಭವನ’ ಲೋಕಾರ್ಪಣೆ 4ಕ್ಕೆ

7

‘ರಾಜಯೋಗ ಭವನ’ ಲೋಕಾರ್ಪಣೆ 4ಕ್ಕೆ

Published:
Updated:

ಮಲೇಬೆನ್ನೂರು: ಪಟ್ಟಣದ ಕರ್ನಾಟಕ ನೀರಾವರಿ ನಿಗಮದ ಮೈದಾನದಲ್ಲಿ ಪ್ರಜಾಪಿತ ಬ್ರಹ್ಮ ಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ನೂತನ ಕಟ್ಟಡ ‘ರಾಜಯೋಗ ಭವನ’ ಲೋಕಾರ್ಪಣೆ ಸಮಾರಂಭ ಫೆ. 4ರಂದು ಬೆಳಿಗ್ಗೆ 10.30ಕ್ಕೆ ನಡೆಯಲಿದೆ ಎಂದು ಬ್ರಹ್ಮಕುಮಾರಿ ಮಂಜುಳಾ ತಿಳಿಸಿದರು.

ರಾಜ್ಯಪಾಲ ವಜುಭಾಯಿ ವಾಲಾ ಅವರು ನೂತನ ಕಟ್ಟಡವನ್ನು ಉದ್ಘಾಟಿಸಲಿದ್ದಾರೆ. ಸಿರಿಗೆರೆ ತರಳಬಾಳು ಮಠದ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ನೇತೃತ್ವ ವಹಿಸಲಿದ್ದಾರೆ. ಈಶ್ವರೀಯ ವಿಶ್ವವಿದ್ಯಾಲಯದ ಹುಬ್ಬಳ್ಳಿ ಉಪವಲಯದ ರಾಜಯೋಗಿ ಬ್ರಹ್ಮಕುಮಾರ ಡಾ. ಬಸವರಾಜ ರಾಜಋಷಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಸಂಸದ ಜಿ.ಎಂ. ಸಿದ್ದೇಶ್ವರ, ಮುಜರಾಯಿ ಸಚಿವ ರುದ್ರಪ್ಪ ಲಮಾಣಿ, ಶಾಸಕರಾದ ಶಾಮನೂರು ಶಿವಶಂಕರಪ್ಪ, ಎಸ್.ಎಚ್. ಶಿವಶಂಕರ್, ಪೂರ್ವ ವಲಯದ ಐಜಿಪಿ ಕೆ.ವಿ.ಶರತ್ ಚಂದ್ರ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ, ಮುಖಂಡರಾದ ಬಿ.ಪಿ. ಹರೀಶ್, ಬಿ.ಚಿದಾನಂದಪ್ಪ, ಎಸ್.ರಾಮಪ್ಪ, ಎನ್.ಜಿ. ನಾಗನಗೌಡ, ದೇವೇಂದ್ರಪ್ಪ ಕುಣಿಬೆಳಕೆರೆ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

ಇದರ ಅಂಗವಾಗಿ ಫೆ. 4ರಿಂದ 8ರವರೆಗೆ ನಿತ್ಯ ವಿಶೇಷ ಉಪನ್ಯಾಸ, ವಚನ ಗಾಯನ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಪಟ್ಟಣದ ಹಾಗೂ ಗ್ರಾಮೀಣ ಭಾಗದಲ್ಲಿ ಫೆ.3ರಂದು ಬೈಕ್ ಜಾಥಾ ನಡೆಯಲಿದೆ. ಕಾರ್ಯಕ್ರಮದಲ್ಲಿ ವಿವಿಧೆಡೆಯ ಸುಮಾರು 4 ಸಾವಿರ ಬ್ರಹ್ಮಕುಮಾರ ಹಾಗೂ ಕುಮಾರಿಯರು ಪಾಲ್ಗೊಳ್ಳಿದ್ದಾರೆ ಎಂದು ಮಾಹಿತಿ ನೀಡಿದರು. ಬಿ.ಕೆ. ಗಂಗಾಂಬಿಕೆ, ಅಕ್ಕಿ ಉದ್ಯಮಿ ಬಿ.ಪಂಚಣ್ಣ, ವೀರಭದ್ರಯ್ಯ, ರುದ್ರಯ್ಯ, ಪ್ರಕಾಶ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry