ಜಲಾಗಾರ ನಿರ್ಮಾಣಕ್ಕೆ ಭೂಮಿ ಪೂಜೆ

7

ಜಲಾಗಾರ ನಿರ್ಮಾಣಕ್ಕೆ ಭೂಮಿ ಪೂಜೆ

Published:
Updated:

ಹಿರೇಕೆರೂರ: ತಾಲ್ಲೂಕಿನ ಹಾದ್ರಿಹಳ್ಳಿ ಗ್ರಾಮದಲ್ಲಿ ರಾಷ್ಟ್ರೀಯ ಗ್ರಾಮೀಣ ಕುಡಿಯವ ನೀರು ಯೋಜನೆಯಡಿ ಮಂಜೂರಾದ ಮೇಲ್ಮಟ್ಟದ ಜಲಾಗಾರ ನಿರ್ಮಾಣ ಕಾಮಗಾರಿಗೆ ಶಾಸಕ ಯು.ಬಿ. ಬಣಕಾರ ಗುರುವಾರ ಭೂಮಿ ಪೂಜೆ ನೆರವೇರಿಸಿದರು.

ಬಳಿಕ ಮಾತನಾಡಿದ ಅವರು, ‘₹ 3೦ ಲಕ್ಷ ವೆಚ್ಚದಲ್ಲಿ ಮೇಲ್ಮಟ್ಟದ ಜಲಾಗಾರ ನಿರ್ಮಾಣ, ಕೊಳವೆ ಬಾವಿಗೆ ಯಂತ್ರ ಅಳವಡಿಕೆ, ವಿತರಣಾ ಮತ್ತು ಏರು ಕೊಳವೆ ಮಾರ್ಗ ಅಳವಡಿಕೆ ಕಾಮಗಾರಿಗೆ ನಡೆಯಲಿದೆ. ಗುತ್ತಿಗೆದಾರರು ಕಾಲಮಿತಿಯಲ್ಲಿ ಕಾಮಗಾರಿ ಮುಗಿಸಬೇಕು’ ಎಂದರು.

ತಾಲ್ಲೂಕು ಪಂಚಾಯ್ತಿ ಸದಸ್ಯ ರಾಜು ಬಣಕಾರ, ಗ್ರಾಮ ಪಂಚಾಯ್ತಿ ಅಧ್ಯಕ್ಷ ಕೆಂಚಪ್ಪ ಹಾರೋಮುಚಡಿ, ಸದಸ್ಯ ಪುಟ್ಟಪ್ಪ ಮಾಳಗೊಂಡನಕೊಪ್ಪ, ಮಲ್ಲನಗೌಡ ತಡಸನಹಳ್ಳಿ, ನಾಗರಾಜ ನರಸಾಪುರ, ಹನುಮಂತಪ್ಪ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry