ಮಂಗಳವಾರ, ಡಿಸೆಂಬರ್ 10, 2019
24 °C

ಚುನಾವಣೆ ಗೆಲ್ಲುವುದಕ್ಕಾಗಿ ಬಿಜೆಪಿಯವರು ಏನು ಮಾಡಲೂ ಹೇಸುವುದಿಲ್ಲ

Published:
Updated:
ಚುನಾವಣೆ ಗೆಲ್ಲುವುದಕ್ಕಾಗಿ ಬಿಜೆಪಿಯವರು ಏನು ಮಾಡಲೂ ಹೇಸುವುದಿಲ್ಲ

ಹಾಸನ: ಓವೈಸಿ ಪಕ್ಷದ ಜೊತೆ ಬಿಜೆಪಿ ಆಂತರಿಕ ಒಪ್ಪಂದ ಮಾಡಿಕೊಳ್ಳಲಿದೆ ಎಂಬ ಸುದ್ದಿ ಬಗ್ಗೆ ಪ್ರತಿಕ್ರಿಯಿಸಿದ ಸಂಸದ ಎಚ್.ಡಿ.ದೇವೇಗೌಡ, ಚುನಾವಣೆ ಗೆಲ್ಲಲು ಬಿಜೆಪಿಯವರು ಏನು ಮಾಡಲು ಹೇಸುವುದಿಲ್ಲ ಎಂದಿದ್ದಾರೆ.

ಕೇಂದ್ರ ಬಜೆಟ್‍ನಲ್ಲಿ ರೈತರ ಸಾಲ ಮನ್ನಾ ಮಾಡದೇ ಇರುವುದಕ್ಕೆ ಬೇಸರ ವ್ಯಕ್ತ ಪಡಿಸಿದ ಗೌಡರು, ಗುಜರಾತ್, ಉತ್ತರ ಪ್ರದೇಶ ಚುನಾವಣೆ ವೇಳೆ ಇದೇ ಮಹಾನುಭಾವರು ಸಾಲ ಮನ್ನಾ ಮಾಡಿದ್ದರು. ಆದರೆ ಈಗ ಕನಿಷ್ಟ ಬಡ್ಡಿಯನ್ನೂ ಮನ್ನಾ ಮಾಡಲಾಗಿಲ್ಲ. ರೈತರಿಗೆ ಯಾವ ರೀತಿ? ಯಾರು ಬೆಂಬಲ ಬೆಲೆ ಕೊಡುತ್ತಾರೋ ಗೊತ್ತಿಲ್ಲ. ಬಜೆಟ್ ನಲ್ಲಿ ಅಸ್ಪಷ್ಟ ಅಂಶಗಳೇ ಹೆಚ್ಚಿವೆ ಎಂದಿದ್ದಾರೆ.

ಪ್ರತಿಕ್ರಿಯಿಸಿ (+)