ಬುಧವಾರ, ಡಿಸೆಂಬರ್ 11, 2019
15 °C

ಫೆ.4ರ ಬೆಂಗಳೂರು ಬಂದ್‌ಗೆ ಹೈಕೋರ್ಟ್‌ ತಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಫೆ.4ರ ಬೆಂಗಳೂರು ಬಂದ್‌ಗೆ ಹೈಕೋರ್ಟ್‌ ತಡೆ

ಬೆಂಗಳೂರು: ಮಹದಾಯಿ ಕುಡಿಯುವ ನೀರಿನ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಸ್ಥಿಕೆ ವಹಿಸುವಂತೆ ಆಗ್ರಹಿಸಿ ಕನ್ನಡ ಪರ ಸಂಘಟನೆಗಳು ಮೋದಿ ಅವರ ಕಾರ್ಯಕ್ರಮ ನಡೆಯುವ ದಿನ ಫೆ. 4ರಂದು ಕರೆ ನೀಡಿದ್ದ ಬೆಂಗಳೂರು ಬಂದ್‌ಗೆ ಹೈಕೋರ್ಟ್‌ ತಡೆ ನೀಡಿತು.

ಫೆ. 4ರಂದು ಕರೆ ನೀಡಿದ್ದ ‘ಬೆಂಗಳೂರು ಬಂದ್‌’ಗೆ ಹೈಕೋರ್ಟ್‌ ಶುಕ್ರವಾರ ತಡೆ ನೀಡಿದೆ ಎಂದು ಎಎನ್‌ಐ ಟ್ವೀಟ್‌ ಮಾಡಿದೆ.

ಫೆ. 4ರಂದು ಕರೆ ನೀಡಿರುವ ಬಂದ್ ಅಸಾಂವಿಧಾನಿಕ ಹಾಗೂ ಕಾನೂನು ಬಾಹಿರ ಎಂದು ನ್ಯಾಯಾಲಯ ಹೇಳಿದೆ.

‘ಸುಪ್ರೀಂ ಕೋರ್ಟ್‌ ತೀರ್ಪಿನ ಪ್ರಕಾರ ಬಂದ್‌ ಮಾಡುವಂತಿಲ್ಲ. ಬೇರೆಯವರಿಗೆ ತೊಂದರೆ ನೀಡುವುದು ಮೂಲಭೂತ ಹಕ್ಕಿನ ಉಲ್ಲಂಘನೆ’ ಎಂದು ಅಭಿಪ್ರಾಯಪಟ್ಟಿರುವ ನ್ಯಾಯಪೀಠ, ಅರ್ಜಿಯ ವಿಚಾರಣೆಯನ್ನು ಎರಡು ವಾರ ಕಾಲ ಮುಂದೂಡಿದೆ.

ವಾಟಾಳ್‌ ನಾಗರಾಜ್‌ ಅವರಿಂದ ಅಡ್ಡಿಪಡಿಸಲು ಪ್ರಯತ್ನ: ಬಿಜೆಪಿ
ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮಕ್ಕೆ ‘ಬೆಂಗಳೂರು ಬಂದ್‌’ ಮೂಲಕ ಅಡ್ಡಿ ಮಾಡಲು ರಾಜ್ಯ ಸರ್ಕಾರ ವಾಟಾಳ್‌ ನಾಗರಾಜ್‌ ಅವರನ್ನು ಅಸ್ತ್ರವಾಗಿ ಬಳಸಿಕೊಂಡಿದೆ ಎಂದು ಬಿಜೆಪಿ ಆರೋಪಿಸಿತ್ತು.

ಮೋದಿ ಗಮನ ಸೆಳೆಯಲು ಬಂದ್‌ ಕರೆ ನೀಡಲಾಗಿತ್ತು
ಬಂದ್‌ ಕರೆ ನೀಡಿರುವ ಕುರಿತು ಗುರುವಾರ ಪ್ರತಿಕ್ರಿಯಿಸಿದ್ದ ಕನ್ನಡ ಚಳವಳಿ ಪಕ್ಷದ ವಾಟಾಳ್‌ ನಾಗರಾಜ್‌ ಅವರು,ಪ್ರಧಾನಿ ಗಮನ ಸೆಳೆಯಲು ಬೆಂಗಳೂರು ಬಂದ್‌ಗೆ ಕರೆ ನೀಡಿದ್ದೇವೆ. ಭಾನುವಾರಕ್ಕೆ ಮೊದಲೇ ಈ ವಿಷಯದ ಬಗ್ಗೆ ಗಮನ ಹರಿಸುವುದಾಗಿ ಭರವಸೆ ನೀಡಿದರೆ ಬಂದ್‌ ಹಿಂದಕ್ಕೆ ಪಡೆಯುತ್ತೇವೆ’ ಎಂದು ತಿಳಿಸಿದ್ದರು.

ಕುಡಿಯುವ ನೀರಿನ ವಿಚಾರವಾಗಿ ಮೂರು ವರ್ಷಗಳಿಂದ ಹೋರಾಟ ನಡೆದಿದೆ. ಪ್ರಧಾನ ಮಂತ್ರಿಯವರು ಮಧ್ಯ ಪ್ರವೇಶಿಸಿ, ಕುಡಿಯುವ ನೀರು ಕೊಡಿಸಬೇಕು ಎಂಬುದಷ್ಟೇ ನಮ್ಮ ಬೇಡಿಕೆ. ಪ್ರಧಾನಿಯವರು ಎಲ್ಲ ರಾಜ್ಯಗಳ ವಿಚಾರ ನೋಡಿಕೊಳ್ಳಬೇಕು. ರಾಜ್ಯದ ಸಂಸದರು ಮತ್ತು ಕೇಂದ್ರ ಮಂತ್ರಿಗಳು ಅವರನ್ನು ಮನವೊಲಿಸುವ ಕೆಲಸ ಮಾಡಬೇಕಿತ್ತು ಎಂದು ವಾಟಾಳ್‌ ಹೇಳಿದ್ದರು.

ಇದನ್ನೂ ಓದಿ...

ಬಂದ್‌ಗೆ ಮೌನವೇ ಉತ್ತರ: ಬಿಜೆಪಿ

 

ಪ್ರತಿಕ್ರಿಯಿಸಿ (+)