ಬುಧವಾರ, ಡಿಸೆಂಬರ್ 11, 2019
15 °C

ಮನೆಗೆ ಆಕಸ್ಮಿಕ ಬೆಂಕಿ, ಮನೆಯಲ್ಲಿದ್ದ ವ್ಯಕ್ತಿ ಸಜೀವ ದಹನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮನೆಗೆ ಆಕಸ್ಮಿಕ ಬೆಂಕಿ, ಮನೆಯಲ್ಲಿದ್ದ ವ್ಯಕ್ತಿ ಸಜೀವ ದಹನ

ತುಮಕೂರು: ಗುಬ್ಬಿ ತಾಲ್ಲೂಕು ಹಾಗಲವಾಡಿ ಹೋಬಳಿ ಗುಡ್ಡೆನಹಳ್ಳಿಯಲ್ಲಿ ವ್ಯಕ್ತಿಯೋರ್ವ ಶುಕ್ರವಾರ ಸಜೀವ ದಹನವಾಗಿದ್ದಾನೆ. ಮೃತ ವ್ಯಕ್ತಿ ರಂಗಸ್ವಾಮಿ(50).  ವಿವಾಹವಾಗಿದ್ದ ಈತ ಪತ್ನಿ ಮಕ್ಕಳಿಂದ ದೂರವಿದ್ದ.  ಬೆಂಗಳೂರಿನಲ್ಲಿ ಪತ್ನಿಯೊಟ್ಟಿಗೆ ಇದ್ದ ಈತ ಐದು ವರ್ಷಗಳಿಂದ ಆಗಿಂದಾಗ್ಗೆ ಊರಿಗೆ ಬಂದು ವಾರಾನುಗಟ್ಟಲೇ ಇದ್ದು ಹೋಗುತ್ತಿದ್ದ.  ವೃದ್ಧ ತಂದೆ ಕುರಿಗಾಹಿ ಸಣ್ಣಕರಿಯಪ್ಪನೊಟ್ಟಿಗೆ ವಾಸವಿದ್ದ ಈತ ಗುಡಿಸಲಿನಲ್ಲಿ ಮಲಗಿದ್ದಾಗ ಘಟನೆ ನಡೆದಿದೆ. ಗ್ರಾಮ ಪಂಚಾಯಿತಿ ಅನುದಾನದಲ್ಲಿ ಮನೆ ಅರ್ಧ ಆಗಿತ್ತು.  ತಂದೆ ಮಗನಿಗೆ ಮಾತ್ರೆ ತರಲು ಹೋಗಿದ್ದಾಗ ಘಟನೆ ನಡೆದಿದೆ. ಮಾನಸಿಕರೋಗಕ್ಕೆ ಒಳಗಾಗಿದ್ದ ಎಂದು ತಂದೆ ಸಣ್ಣಕರಿಯಪ್ಪ ಚೇಳೂರು ಠಾಣೆಗೆ ದೂರು ನೀಡಿದ್ದಾರೆ.

ಪ್ರತಿಕ್ರಿಯಿಸಿ (+)