ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿಯೊಂದು ಸಾವನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡುವುದು ಪಕ್ಷಗಳಿಗೆ ಶೋಭೆ ತರುವಂಥದ್ದಲ್ಲ

Last Updated 8 ಫೆಬ್ರುವರಿ 2018, 8:54 IST
ಅಕ್ಷರ ಗಾತ್ರ

ಮಂಗಳೂರು: ಸಂತೋಷ ಕೊಲೆ ಪ್ರಕರಣದ ‌ಕುರಿತು ಪ್ರತಿಕ್ರಿಯಿಸಿದ ಸಚಿವ ಯು.ಟಿ ಖಾದರ್, ಸಾವನ್ನು ಯಾರೂ ಸಮರ್ಥಿಸಿಕೊಳ್ಳುವುದಿಲ್ಲ. ಇದನ್ನು ಖಂಡಿಸುತ್ತೇವೆ. ನೈಜ ಆರೋಪಿಗಳನ್ನು ಪತ್ತೆ ಹಚ್ಚಲಾಗುವುದು. ಆದರೆ, ಪ್ರತಿಯೊಂದು ಸಾವನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡುವುದು ಪಕ್ಷಗಳಿಗೆ ಶೋಭೆ ತರುವಂಥದ್ದಲ್ಲ ಎಂದಿದ್ದಾರೆ.

ಮುಖ್ಯಮಂತ್ರಿ ನನ್ನ ಮನೆಗೆ ಬಂದು ಔತಣಕೂಟಕ್ಕೆ ಹೋಗಿರುವುದನ್ನೇ ರಾಜಕೀಯ ವಿಷಯವಾಗಿ ಮಾತನಾಡುತ್ತಿರುವುದು ಸರಿಯಲ್ಲ ಎಂದರು.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಇದುವರೆಗೆ ಯಾರ ಮನೆಗಾದರೂ ಭೇಟಿ ನೀಡಿದ್ದಾರೆಯೇ ಎಂದು ಪ್ರಶ್ನಿಸಿದ ಅವರು, ನಮ್ಮ ಸೈನಿಕರ ಹತ್ಯೆ ಆಗುತ್ತಿರುವಾಗ ದೇಶದ್ರೋಹಿ ನವಾಜ್ ಷರೀಫ್ ಮನೆಗೆ ಹೋಗಿ ಪ್ರಧಾನಿ ಚಹಾ ಕುಡಿದು ಬರುತ್ತಾರೆ. ಆದರೆ, ಹುತಾತ್ಮರಾದ ಸೈನಿಕರ ಮನೆಗೆ ಭೇಟಿ ಕೊಡಲು ಇವರಿಗೆ ಸಮಯವಿಲ್ಲ ಎಂದು ತಿರುಗೇಟು ನೀಡಿದರು.

ನನ್ನ ಮನೆಗೆ ಸಿಎಂ ಔತಣಕೂಟಕ್ಕೆ ಬಂದಿದ್ದನ್ನು ಪ್ರಶ್ನಿಸುವವರು, ಪ್ರಧಾನಿಯ ನಡೆಯನ್ನು ಏಕೆ ಪ್ರಶ್ನಿಸುತ್ತಿಲ್ಲ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT