ಭಾನುವಾರ, ಡಿಸೆಂಬರ್ 8, 2019
25 °C

ನೋವಿಗೆ ಸೇವೆಯ ಉಪಶಮನ

Published:
Updated:
ನೋವಿಗೆ ಸೇವೆಯ ಉಪಶಮನ

ಕೊನೆಗಾಲದ ನೆಮ್ಮದಿಗೆ ‘ಕರುಣಾ’

ಕ್ಯಾನರ್‌ನಲ್ಲಿ ಕೊನೆಯ ಹಂತದಲ್ಲಿರುವವರು ನೆಮ್ಮದಿಯಾಗಿ ಕೊನೆಯುಸಿರೆಳೆಯಬೇಕು ಎಂಬ ಉದ್ದೇಶದಿಂದ ಭಾರತೀಯ ಕ್ಯಾನ್ಸರ್ ಸೊಸೈಟಿ ಹಾಗೂ ಇಂದಿರಾನಗರದ ರೋಟರಿ ಸಹಯೋಗದೊಂದಿಗೆ ಕಿಶೋರ್‌ ಚಂದ್ರ ಅವರು 1994ರಲ್ಲಿ ಮಾರತ್ತಹಳ್ಳಿಯಲ್ಲಿ ಸ್ಥಾಪಿಸಿದ ಸಂಸ್ಥೆ ‘ಕರುಣಾಶ್ರಯ’.

ಇಲ್ಲಿ 75 ಹಾಸಿಗೆಗಳಿದ್ದು, ಎಲ್ಲ ಬಗೆಯ ಕ್ಯಾನ್ಸರ್ ರೋಗಿಗಳಿಗೆ ಉಪಶಮಕ (ಪ್ಯಾಲೇಟೀವ್‌ ಕೇರ್‌) ಚಿಕಿತ್ಸೆ ನೀಡಲಾಗುತ್ತದೆ. ರೋಗಿಗಳ ಅರೋಗ್ಯ ಕ್ರಮದ ಅನುಸಾರ ಊಟ ಹಾಗೂ ಉಪಚಾರದ ವ್ಯವಸ್ಥೆ ಇದೆ. ಇದುವರೆಗೆ ಸಂಸ್ಥೆಯು 20 ಸಾವಿರ ಕ್ಯಾನ್ಸರ್ ರೋಗಿಗಳಿಗೆ ಉಪಶಮಕ ಚಿಕಿತ್ಸೆ ನೀಡಿದೆ. ಕ್ಯಾನ್ಸರ್‌ ಗುಣಪಡಿಸುವ ಯಾವುದೇ ಔಷಧ ಅಥವಾ ತಪಾಸಣೆ ಇಲ್ಲಿ ಸಿಗುವುದಿಲ್ಲ. ನೋವು ನಿವಾರಕ ಔಷಧವನ್ನು ಮಾತ್ರ ನೀಡಲಾಗುತ್ತದೆ. ರೋಗಿಗಳ ಮನೆಗಳಿಗೇ ತೆರಳಿ ಉಪಚರಿಸುವ ಸೌಲಭ್ಯವೂ ಇದೆ. ಎಲ್ಲ ಸೇವೆಗಳೂ ಉಚಿತ.

ವಿಳಾಸ: ಕರುಣಾಶ್ರಯ, ವರ್ತೂರು ಮುಖ್ಯರಸ್ತೆ, ಕುಂದಲಹಳ್ಳಿ ಗೇಟ್‌, ಮಾರತಹಳ್ಳಿ

ಸಂಪರ್ಕ: 080 2847 6133, 080 2847 6509

**

ಕ್ಯಾನ್ಸರ್ ಬಂದರೂ ಕಲಿಸುತ್ತೆ ‘ಸಮೀಕ್ಷಾ’

ಕ್ಯಾನ್ಸರ್‌ನಿಂದ ಬಳಲುವ ಮಕ್ಕಳು ಸಾಮಾನ್ಯವಾಗಿ ಶಿಕ್ಷಣದಿಂದ ವಂಚಿತರಾಗುತ್ತಾರೆ. ಈ ಕೊರತೆಯನ್ನು ನೀಗಿಸಲೆಂದು ಸಮೀಕ್ಷಾ ಫೌಂಡೇಷನ್‌ ಕಾರ್ಯಪ್ರವೃತ್ತವಾಗಿದೆ. ಕ್ಯಾನ್ಸರ್‌ಗೆ ಸಂಬಂಧಿಸಿದ ವಿವಿಧ ಚಿಕಿತ್ಸೆಗಳನ್ನು ಪೆಡೆದುಕೊಳ್ಳುವ ಮಕ್ಕಳಿಗೆ ಆಸ್ಪತ್ರೆಯಲ್ಲಿಯೇ ಸೃಜನಾತ್ಮಕ ಕಲಿಕೆಗೆ ಅವಕಾಶ ನೀಡಿದೆ. ಸಂಸ್ಥೆಯ ಕಾರ್ಯಕರ್ತರು ನಗರದ ಆಯ್ದ ಕೆಲ ಆಸ್ಪತ್ರೆಗಳಿಗೆ ತೆರಳಿ ಅಲ್ಲಿ ಚಿಕಿತ್ಸೆ ಪೆಡೆಯುತ್ತಿರುವ ಮಕ್ಕಳಿಗೆ ಉಚಿತವಾಗಿ ಪಾಠ ಮಾಡುತ್ತಾರೆ. ಚಿಕಿತ್ಸೆ ಪಡೆಯುತ್ತಿರುವ ಮಕ್ಕಳಿಗೆ ಮಾನಸಿಕ ಖಿನ್ನತೆ ಕಾಡಬಾರದು ಅನೇಕ ಮನರಂಜನಾ ಕಾರ್ಯಕ್ರಮಗಳನ್ನು ಸಂಸ್ಥೆ ಆಯೋಜಿಸುತ್ತದೆ.

ವಿಳಾಸ: ಸಮೀಕ್ಷಾ ಪೌಂಡೇಷನ್‌, ಕಪೂರ್ ವಾರ್ಡ್‌, ಕಿದ್ವಾಯಿ ಮೆಮೋರಿಯಲ್ ಇನ್ಸ್‌ಟಿಟ್ಯೂಟ್ ಆಫ್ ಆಂಕೋಲಜಿ, ಮರಿಗೌಡ ರಸ್ತೆ

ಸಂಪರ್ಕ: 98451 98983

**

ಮಕ್ಕಳ ಕಣ್ಣು ಜೋಪಾನ ಮಾಡುವ ‘ಇಕ್ಷಾ’

ಮಕ್ಕಳಲ್ಲಿ ಕಂಡುಬರುವ ರೆಟಿನೊಬ್ಲಾಸ್ಟೋಮ (ಕಣ್ಣಿನ ಕ್ಯಾನ್ಸರ್) ಕಾಯಿಲೆಯನ್ನು ಆರಂಭದ ಹಂತದಲ್ಲಿಯೇ ಗುರುತಿಸಿ ಚಿಕಿತ್ಸೆ ನೀಡಿದರೆ, ಗುಣವಾಗುವ ಸಾಧ್ಯತೆ ಹೆಚ್ಚು. ನಿರ್ಲಕ್ಷ್ಯ ತೋರಿದರೆ ಮಕ್ಕಳು ದೃಷ್ಟಿ ಕಳೆದುಕೊಳ್ಳಬಹುದು. ಕ್ಯಾನ್ಸರ್‌ನಿಂದ ಬಳಲುವ ಆರ್ಥಿಕವಾಗಿ ದುರ್ಬಲವರ್ಗದ ಮಕ್ಕಳ ಚಿಕಿತ್ಸಾ ವೆಚ್ಚವನ್ನು ಇಕ್ಷಾ ಪೌಂಡೇಷನ್‌ ಭರಿಸುತ್ತಿದೆ. ನಾರಾಯಣ ನೇತ್ರಾಲಯ ಮತ್ತು ಮಜುಮದಾರ್ ಷಾ ಕ್ಯಾನ್ಸರ್ ಆಸ್ಪತ್ರೆಗಳು ‘ಇಕ್ಷಾ’ ಜೊತೆಗೆ ಕೈಗೂಡಿಸಿವೆ.

ವಿಳಾಸ: ಇಕ್ಷಾ ಪೌಂಡೇಷನ್‌ 3ನೇ ಮಹಡಿ, 14ನೇ ಅಡ್ಡರಸ್ತೆ, 3ನೇ ಮುಖ್ಯರಸ್ತೆ, ವೈಯಾಲಿಕಾವಲ್‌.

ಸಂಪರ್ಕ: ಇಮೇಲ್‌– aravind@ikshafoundation.org

**

ಕರ್ನಾಟಕ ಕ್ಯಾನ್ಸರ್ ಸೊಸೈಟಿ

1968ರಲ್ಲಿ ಕೊರವಂಜಿ ಶಿವರಾಮ್, ಕೃಷ್ಣಭಾರ್ಗವ್‌ ಮೊದಲಾದ ವೈದ್ಯರು ಸೇರಿ ಆರಂಭಿಸಿದ ಸಂಸ್ಥೆ ‘ಕರ್ನಾಟಕ ಕ್ಯಾನ್ಸರ್ ಸೊಸೈಟಿ’. ವೈಯಾಲಿಕಾವಲ್‌ನಲ್ಲಿರುವ ಈ ಸಂಸ್ಥೆ ರಾಜ್ಯದಾದ್ಯಂತ ಕ್ಯಾನ್ಸರ್‌ ಕುರಿತ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತದೆ. ಪ್ರತಿ ತಿಂಗಳ ಎರಡನೇ ಶನಿವಾರ ಉಚಿತ ಕ್ಯಾನ್ಸರ್‌ ತಪಾಸಣಾ ಶಿಬಿರ ನಡೆಸುತ್ತಿದೆ. ರಿಯಾಯಿತಿ ದರದಲ್ಲಿ ಕ್ಯಾನ್ಸರ್ ಸಂಬಂಧಿತ ಔಷಧಗಳನ್ನು ಪೂರೈಕೆ ಹಾಗೂ ಪ್ರತಿನಿತ್ಯ ಬಾಯಿಯ ಕ್ಯಾನ್ಸರ್‌ಗೆ ಉಚಿತ ತಪಾಸಣೆ ಇರುತ್ತದೆ.

ವಿಳಾಸ: ಕರ್ನಾಟಕ ಕ್ಯಾನ್ಸರ್‌ ಸೊಸೈಟಿ, ವೈಯಾಲಿಕಾವಲ್‌, ಮಲ್ಲೇಶ್ವರ

ಸಂಪರ್ಕ: 080 2344 8534

**

ಸ್ತನ ಕ್ಯಾನ್ಸರ್ ಜಾಗೃತಿಗೆ ‘ಪೂರ್ಣ’ ಪ್ರಯತ್ನ

ಬಸ್‌ಗಳಲ್ಲಿ ದಕ್ಷಿಣ ಭಾರತದ ವಿವಿಧ ಪ್ರದೇಶಗಳಿಗೆ ತೆರಳುವ ತಜ್ಞರು ಉಚಿತ ಸ್ತನ ಕ್ಯಾನ್ಸರ್ ತಪಾಸಣಾ ಶಿಬಿರ ನಡೆಸಿಕೊಡುತ್ತಾರೆ. ‘ಪೂರ್ಣಸುಧಾ ಕ್ಯಾನ್ಸರ್‌ ಫೌಂಡೇಷನ್‌’ನ ಈ ಪ್ರಯತ್ನಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಜನರಲ್ಲಿ ಕ್ಯಾನ್ಸರ್ ಕುರಿತು ಜಾಗೃತಿ ಮೂಡಿಸುವ ಹತ್ತಾರು ಕಾರ್ಯಕ್ರಮಗಳನ್ನೂ ಫೌಂಡೇಶನ್ ನಿರ್ವಹಿಸುತ್ತಿದೆ. ಈವರೆಗೆ 10 ಸಾವಿರಕ್ಕೂ ಹೆಚ್ಚು ಮಹಿಳೆಯರಿಗೆ ಉಚಿತ ಸ್ತನ ಕ್ಯಾನ್ಸರ್ ತಪಾಸಣೆ ನಡೆಸಲಾಗಿದೆ.

ವಿಳಾಸ: ಪೂರ್ಣಸುಧಾ ಕ್ಯಾನ್ಸರ್ ಫೌಂಡೇಶನ್, ಜಯನಗರ 7ನೇ ಬ್ಲಾಕ್‌

ಸಂಪರ್ಕ: 90083 42342

ಪ್ರತಿಕ್ರಿಯಿಸಿ (+)