ಬುಧವಾರ, ಡಿಸೆಂಬರ್ 11, 2019
16 °C

ಚಿಕಿತ್ಸೆ ಪಡೆಯಲು ವಿದೇಶಗಳಿಂದಲೂ ಬರ್ತಾರೆ

Published:
Updated:
ಚಿಕಿತ್ಸೆ ಪಡೆಯಲು ವಿದೇಶಗಳಿಂದಲೂ ಬರ್ತಾರೆ

ಶ್ರೀಶಂಕರ ಕ್ಯಾನ್ಸರ್ - ಸಂಶೋಧನಾ ಕೇಂದ್ರ

ವೈಶಿಷ್ಟ್ಯ: ಕ್ಯಾನ್ಸರ್ ತಪಾಸಣೆಗೆ ಮೊಬೈಲ್ ಘಟಕ, ಶೇ 10ರಷ್ಟು ರೋಗಿಗಳಿಗೆ ಉಚಿತ ಚಿಕಿತ್ಸೆ, ಕ್ಯಾನ್ಸರ್ ನಿಯಂತ್ರಣ ಔಷಧಗಳ ದರದಲ್ಲಿ ಶೇ 30ರಷ್ಟು ರಿಯಾಯ್ತಿ, ರೋಗಿಯ ಜೊತೆ ಬರುವ ಒಬ್ಬ ಸಹಾಯಕರಿಗೆ ಆಸ್ಪತ್ರೆಗೆ ಹೊಂದಿಕೊಂಡಂತಿರುವ ಡಾರ್ಮೆಟರಿ ವ್ಯವಸ್ಥೆ, ಸೇವಾ ತರಬೇತಿ, ಉಚಿತ ಊಟ-ಉಪಹಾರ, 60 ಹಾಸಿಗೆಗಳ ಮಕ್ಕಳ ಕ್ಯಾನ್ಸರ್ ವಾರ್ಡ್

ಚಿಕಿತ್ಸಾ ಉಪಕರಣ: ವೇರಿಯನ್ ರ‍್ಯಾಪಿಡ್ ಆರ್ಕ್‍ಲೈನರ್ ಆಕ್ಸಿಲರೇಟರ್, ಬ್ಯಾಕ್ ಥೆರಪಿ ಘಟಕ, ಬಿಗ್ ಬೇರ್ ಸಿ.ಟಿ., ಬ್ರೈಟ್‍ವೀವ್ ಗ್ಯಾಮಾ ಕ್ಯಾಮೆರಾ, ಹಿಸ್ಟೊಪೆಥಾಲಜಿ, ಆ್ಯಕ್ಯುಟಿಸಿಮ್ಯುಲೇಟರ್ ಸೇರಿದಂತೆ ಹಲವು ಆಧುನಿಕ ಯಂತ್ರೋಪಕರಣಗಳು

ಯಾರು ಹೆಚ್ಚು ಬರ್ತಾರೆ: ರಾಜ್ಯ, ಹೊರರಾಜ್ಯ

ವಿಳಾಸ: ಶಂಕರ ಮಠದ ಆವರಣ, ಮೊದಲನೇ ರಸ್ತೆ, ಶಂಕರಪುರಂ, ಬಸವನಗುಡಿ ದೂ– 080 2698 1100

**

ಕಿದ್ವಾಯಿ ಸ್ಮಾರಕ ಗ್ರಂಥಿ ಆಸ್ಪತ್ರೆ

ವೈಶಿಷ್ಟ್ಯ: ತಜ್ಞವೈದ್ಯರು ಮತ್ತು ಸಿಬ್ಬಂದಿ, ವಿಶ್ವ ಆರೋಗ್ಯ ಸಂಸ್ಥೆಯಿಂದ ಮೆಚ್ಚುಗೆ, ಉಚಿತ ಕ್ಯಾನ್ಸರ್ ತಪಾಸಣಾ ಶಿಬಿರಗಳು, ಜಾಗೃತಿ ಕಾರ್ಯಕ್ರಮಗಳು

ಉ‍ಪಕರಣ: ಆಧುನಿಕ ಚಿಕಿತ್ಸಾ ಉಪಕರಣಗಳು

ಯಾರು ಹೆಚ್ಚು ಬರ್ತಾರೆ: ರಾಜ್ಯದ ವಿವಿಧ ಜಿಲ್ಲೆಗಳಿಂದ, ನೆರೆಯ ರಾಜ್ಯಗಳು

ವಿಳಾಸ: ಕಿದ್ವಾಯಿ ಆಸ್ಪತ್ರೆ, ಡಾ.ಎಂ.ಎಚ್. ಮರಿಗೌಡ ರಸ್ತೆ, ಬೆಂಗಳೂರು ಡೇರಿ ಸಮೀಪ, ದೂ– 080 2609 4000

**

ಎಚ್‌ಸಿಜಿ ಆಸ್ಪತ್ರೆ

ವೈಶಿಷ್ಟ್ಯ: ಮೌಲ್ಯವರ್ಧಿತ ಚಿಕಿತ್ಸೆ, ಕ್ಯಾನ್ಸರ್‌ಗೆ ಸಂಬಂಧಿಸಿದಂತೆ ಒಂದೇ ಸೂರಿನಲ್ಲಿ ಸಕಲ ಚಿಕಿತ್ಸಾ ಸೌಲಭ್ಯ, ದೇಶ–ವಿದೇಶ ರೋಗಿಗಳು ಒಂದೇ ರೀತಿಯ ಶುಲ್ಕ, ಬಡವರಿಗೆ ಕಾನ್ಸರ್ ಫೌಂಡೇಷನ್ ಮೂಲಕ ಸಹಾಯ

ಚಿಕಿತ್ಸಾ ಉಪಕರಣ: ಜಾಗತಿಕಮಟ್ಟದ ಚಿಕಿತ್ಸಾ ಉಪಕರಣಗಳು, ಮಲ್ಟಿ ಸ್ಪೆಷಾಲಿಟಿ, ರೋಬೊಟಿಕ್ ಸರ್ಜರಿ

ಯಾರು ಹೆಚ್ಚು ಬರ್ತಾರೆ: ಐರೋಪ್ಯ ರಾಷ್ಟ್ರಗಳು, ದಕ್ಷಿಣ ಆಫ್ರಿಕಾ, ಬ್ರೆಜಿಲ್ ಮತ್ತಿತರ ರಾಷ್ಟ್ರಗಳು

ವಿಳಾಸ: ಎಚ್‌ಸಿಜಿ ಆಸ್ಪತ್ರೆ, ಸುಬ್ಬಯ್ಯ ವೃತ್ತದ ಹತ್ತಿರ, ಸಂಪಂಗಿ ರಾಮನಗರ.

**

ಫೋರ್ಟೀಸ್ ಆಸ್ಪತ್ರೆ

ವೈಶಿಷ್ಟ್ಯ: ಮಲ್ಟಿ ಸ್ಪೆಷಾಲಿಟಿ ಇರುವ ತಜ್ಞ ವೈದ್ಯರು ಮತ್ತು ಸಿಬ್ಬಂದಿ, ವಿಶ್ವದರ್ಜೆಯ ಗುಣಮಟ್ಟದ ಸೇವೆ, ಇಮ್ಯುನೋಥೆರಪಿ, ಗುಣಮಟ್ಟದ ಐಸಿಯು

ಚಿಕಿತ್ಸಾ ಉಪಕರಣ: ರೋಬೊಟಿಕ್ ಸರ್ಜರಿ, ಮಿನಿಮಲ್ ಇನ್ವೇಜಲ್ ಸರ್ಜರಿ, ಲ್ಯಾಪ್ರೊಸ್ಕೊಪಿಕ್ ಸರ್ಜರಿ

ಯಾರು ಹೆಚ್ಚು ಬರ್ತಾರೆ: ಯಮನ್, ಬಾಂಗ್ಲಾದೇಶ, ತಾಂಜೇನಿಯಾ, ದಕ್ಷಿಣ ಆಫ್ರಿಕಾ

ವಿಳಾಸ: ಫೋರ್ಟಿಸ್ ಆಸ್ಪತ್ರೆ, ಬನ್ನೇರುಘಟ್ಟ ಮುಖ್ಯರಸ್ತೆ

ಪ್ರತಿಕ್ರಿಯಿಸಿ (+)