ಸೋಮವಾರ, ಡಿಸೆಂಬರ್ 9, 2019
22 °C

ಹಿಂದಿ ಚಿತ್ರದಲ್ಲಿ ಕೃತಿ ಕರಬಂಧ

Published:
Updated:
ಹಿಂದಿ ಚಿತ್ರದಲ್ಲಿ ಕೃತಿ ಕರಬಂಧ

‘ಗೂಗ್ಲಿ’ ಸುಂದರಿ ಕೃತಿ ಕರಬಂಧ ಅಭಿನಯದ ಹೊಸ ಚಿತ್ರ ‘ವೀರೆ ಕಿ ವೆಡ್ಡಿಂಗ್’ ಟ್ರೇಲರ್ ಬಿಡುಗಡೆಯಾಗಿದ್ದು, ಕುತೂಹಲ ಕೆರಳಿಸುವಂತಿದೆ.

ಪುಲಕಿತ್‌ ಸಾಮ್ರಾಟ್ ನಾಯಕನಾಗಿರುವ ಈ ಚಿತ್ರದಲ್ಲಿ ಜಿಮ್ಮಿ ಶೇರ್‌ಗಿಲ್ ಪ್ರಧಾನ ಪಾತ್ರದಲ್ಲಿದ್ದಾರೆ. ಸಲ್ಮಾನ್ ಖಾನ್ ಅವರನ್ನು ಅನುಸರಿಸುವ ಪಾತ್ರದಲ್ಲಿ ಕಾಣಿಸಿಕೊಂಡಿರುವ ಪುಲಕಿತ್, ತನ್ನ ಸಮಸ್ಯೆಗಳಿಗಿಂತ ಜನರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಹೆಚ್ಚು ತಲೆಕೆಡಿಸಿಕೊಳ್ಳುವವ. ಕೃತಿ ಜೊತೆಗೆ ಲವ್ವಿಡವ್ವಿ ಶುರುವಾದ ನಂತರ ಅನುಭವಿಸುವ ಪಡಿಪಾಟಲುಗಳೇ ‘ವೀರೆ ಕಿ ವೆಡ್ಡಿಂಗ್’ ಚಿತ್ರ.

ಕೃತಿ ಬಜಾರಿ, ತುಂಟಿಯಾಗಿ ಕಾಣಿಸಿ ಕೊಂಡಿದ್ದಾರೆ. ಪಬ್‌ನಲ್ಲಿ ಅರೆಬರೆ ಉಡುಗೆ ತೊಟ್ಟು ಕುಣಿಯುವ ದೃಶ್ಯಗಳಲ್ಲಿ ಹಾಲ್ಬಣ್ಣದ ಮೈ ತುಸು ಹೆಚ್ಚೇ ಕಾಣಿಸಿದೆ. ಪುಲಕಿತ್ ಸಹೋದರನಾಗಿ ಕಾಣಿಸಿಕೊಂಡಿರುವ ಜಿಮ್ಮಿ ಶೇರ್‌ಗಿಲ್ ಸಂಭಾಷಣೆಗಳು ನಗು ತರಿಸುತ್ತವೆ. ‘ಹುಡುಗಿಯರ ಹಿಂದೆ ಜಾಸ್ತಿ ಓಡ್ಬೇಡ ತಮ್ಮಾ, ವಾಪಸ್ ಬರೋದೇ ಕಷ್ಟವಾಗುತ್ತೆ’ ಅನ್ನೋ ಮಾತುಗಳು ಇಷ್ಟವಾಗುತ್ತವೆ.

2.42 ನಿಮಿಷದ ಟ್ರೇಲರ್‌ ಕೊನೆಯಲ್ಲಿ ಜಿಮ್ಮಿಯ ಮದುವೆ ವಿಷಯ ಪ್ರಸ್ತಾಪವಾದಾಗ ‘ಸಲ್ಮಾನ್ ಖಾನ್, ರಾಹುಲ್ ಮತ್ತು ನಾನು’ ಒಟ್ಟಿಗೇ ಮದುವೆ ಆಗಬೇಕೆಂದು ತೀರ್ಮಾನಿಸಿದ್ದೇವೆ ಎನ್ನುವ ಮಾತು ಪಂಚ್ ನೀಡುವಂತಿದೆ.

ರಾಜ್‌ಕುಮಾರ್ ರಾವ್ ಜತೆ ‘ಶಾದಿ ಮೇ ಜರೂರ್ ಆನಾ’ದಲ್ಲಿ ನಾಯಕಿಯಾಗಿ ಕಾಣಿಸಿಕೊಂಡ ಬಳಿಕ ಕೃತಿ ಕರಬಂಧ ಅಭಿನಯದ ಎರಡನೇ ಹಿಂದಿ ಚಿತ್ರ ಇದು. ಚಿತ್ರದ ಬಗ್ಗೆ ಕೃತಿ ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಮಾರ್ಚ್‌ 9ಕ್ಕೆ ಸಿನಿಮಾ ತೆರೆ ಕಾಣಲಿದೆ.

ಪ್ರತಿಕ್ರಿಯಿಸಿ (+)