ಭಾನುವಾರ, ಡಿಸೆಂಬರ್ 8, 2019
25 °C

‘ದಿ ಪ್ಯಾಷನ್‌ ಆಫ್‌ ದ ಕ್ರೈಸ್ಟ್‌’ನ ಮತ್ತೊಂದು ಭಾಗ

Published:
Updated:
‘ದಿ ಪ್ಯಾಷನ್‌ ಆಫ್‌ ದ ಕ್ರೈಸ್ಟ್‌’ನ ಮತ್ತೊಂದು ಭಾಗ

ಮೆಲ್‌ ಗಿಬ್ಸನ್‌ ಮತ್ತೊಂದು ಮಹತ್ವಾಕಾಂಕ್ಷಿ ಚಿತ್ರ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. 2004ರಲ್ಲಿ ಬಿಡುಗಡೆಯಾಗಿದ್ದ, ತಾವೇ ನಿರ್ದೇಶಿಸಿದ ಹಿಟ್‌ ಚಿತ್ರ ‘ದಿ ಪ್ಯಾಷನ್‌ ಆಫ್‌ ದ ಕ್ರೈಸ್ಟ್‌’ ಚಿತ್ರದ ಎರಡನೇ ಭಾಗದ ನಿರ್ಮಾಣಕ್ಕೆ ಕೈ ಹಾಕಿದ್ದಾರೆ.

‘ದಿ ಪ್ಯಾಷನ್‌ ಆಫ್‌ ದ ಕ್ರೈಸ್ಟ್‌’ ಚಿತ್ರದಲ್ಲಿ ಕ್ರಿಸ್ತನ ಪಾತ್ರ ಮಾಡಿ ಜನಪ್ರಿಯರಾಗಿದ್ದ ನಟ ಜಿಮ್ ಕ್ಯಾವಿಜೆಲ್ ಇದರಲ್ಲೂ ಮುಖ್ಯಪಾತ್ರ ನಿರ್ವಹಿಸಲಿದ್ದಾರೆ. ಈ ಮಾತನ್ನು ಸ್ವತಃ  ಜಿಮ್ ಕ್ಯಾವಿಜೆಲ್ ಸ್ಪಷ್ಟಪಡಿಸಿದ್ದಾರೆ.

ಆದರೆ ಈ ಚಿತ್ರದ ಕುರಿತ ಯಾವುದೇ ಮಾಹಿತಿಯನ್ನು ಅವರು ಬಿಟ್ಟುಕೊಟ್ಟಿಲ್ಲ. ‘ಈ ಚಿತ್ರ ಸಾರ್ವಕಾಲಿಕ ಮಹಾನ್‌ ಚಿತ್ರ ಎನಿಸಿಕೊಳ್ಳಲಿದೆ. ಜಗತ್ತಿನ ಪ್ರೇಕ್ಷಕರು ಚಿತ್ರ ನೋಡಿ ನಿಬ್ಬೆರಗಾಗಲಿದ್ದಾರೆ’ ಎಂದಷ್ಟೇ ಹೇಳಿದ್ದಾರೆ.

‘ದಿ ಪ್ಯಾಷನ್‌ ಆಫ್‌ ದ ಕ್ರೈಸ್ಟ್‌’ ಚಿತ್ರದ ಕೆಲ ಗ್ರಾಫಿಕ್‌ ದೃಶ್ಯಗಳು ಹಿಂಸಾತ್ಮಕವಾಗಿವೆ ಎಂಬ ಆಕ್ಷೇಪ ವ್ಯಕ್ತವಾಗಿತ್ತು. ಆದರೂ ಈ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಭರ್ಜರಿ ಗಳಿಕೆ ದಾಖಲಿಸಿತ್ತು.

ಪ್ರತಿಕ್ರಿಯಿಸಿ (+)