ಶುಕ್ರವಾರ, ಡಿಸೆಂಬರ್ 6, 2019
23 °C

ಬಿಜೆಪಿ ಕಾರ್ಯಕರ್ತನ ಕೊಲೆಗೆ ಪ್ರಕಾಶ್‌ ರೈ ಪ್ರತಿಕ್ರಿಯಿಸದಕ್ಕೆ ಜಗ್ಗೇಶ್‌ ಅಸಮಾಧಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಿಜೆಪಿ ಕಾರ್ಯಕರ್ತನ ಕೊಲೆಗೆ ಪ್ರಕಾಶ್‌ ರೈ ಪ್ರತಿಕ್ರಿಯಿಸದಕ್ಕೆ ಜಗ್ಗೇಶ್‌ ಅಸಮಾಧಾನ

ಬೆಂಗಳೂರು: ಕೆ.ಸಂತೋಷ್‌ ಹತ್ಯೆ ಕುರಿತು ನಟ ಪ್ರಕಾಶ್‌ ರೈ ಮತ್ತು ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್‌.ದೊರೆಸ್ವಾಮಿ ಮೌನ ವಹಿಸಿರುವುದು ಯಾಕೆ ಎಂದು ಬಿಜೆಪಿ ಮುಖಂಡ, ನಟ ಜಗ್ಗೇಶ್‌ ಟ್ವಿಟರ್‌ನಲ್ಲಿ ಪ್ರಶ್ನಿಸಿದ್ದಾರೆ.

‘ಮಿತ್ರ ಪ್ರಕಾಶ್ ರೈ ಹಾಗೂ ಪಿತೃಸಮಾನರಾದ ದೊರೆಸ್ವಾಮಿಯವರೆ, ಕೊಲೆಯಾದ ಈ ಕಂದಮ್ಮನ ಬಗ್ಗೆ ಮಾತಾಡಲು ಯಾಕೆ ನಿಮ್ಮ ತುಟಿ ಚಲನೆಯಿಲ್ಲಾ! ಯಾಕೆ ನಿಮ್ಮ ನಾಲಿಗೆ ನುಡಿಯಲಿಲ್ಲಾ.! ಕಾಂಗ್ರೆಸ್ ಪಾಪದ ಋಣ ತಡೆ ಹಿಡಿಯಿತೆ..! ಗಮನಿಸುತ್ತಿದ್ದಾರೆ ಕರುನಾಡ ಜನ. ಪಾರದರ್ಶಕತೆ ನಡೆ ಇರಲಿ! ಇಲ್ಲದಿದ್ದರೆ ನಗೆಪಾಟಲು ಶ್ರಮದ ನಿಮ್ಮ ಬದುಕು!’ ಎಂದು ಅವರು ಟ್ವೀಟ್‌ ಮಾಡಿದ್ದಾರೆ.

ಈ ಟ್ವೀಟ್‌ಗೆ ಒಂದು ಸಾವಿರಕ್ಕೂ ಹೆಚ್ಚು ಜನ ಲೈಕ್‌ ಒತ್ತಿದ್ದಾರೆ. 200 ಹೆಚ್ಚು ಜನರು ರೀಟ್ವೀಟ್‌ ಮಾಡಿದ್ದಾರೆ. 149 ಜನ ಕಾಮೆಂಟ್‌ ಮಾಡಿದ್ದಾರೆ.

 

 

‘ವಿಜಯಪುರದ ವಿದ್ಯಾರ್ಥಿನಿಯ ಅತ್ಯಾಚಾರ, ಕೊಲೆಯಾದಾಗ ನೀವೇಕೆ ಪ್ರತಿಕ್ರಿಯಿಸಲಿಲ್ಲ. ಕೊಲೆಯ ಬಗ್ಗೆ ಮಾತನಾಡಿದರೆ ಮಾತ್ರ ರೈ ಹಾಗೂ ದೊರೆಸ್ವಾಮಿ ಅವರು ನಿಮಗೆ ಒಳ್ಳೆಯವರಾಗುತ್ತಾರೆಯೇ? ದೇಶದಲ್ಲಿ ಕೋಮುದ್ವೇಷದಿಂದ, ಗೋರಕ್ಷಣೆಯ ಹೆಸರಿನಿಂದ ನಡೆದ ಎಷ್ಟು ಕೊಲೆಗಳ ಬಗ್ಗೆ ಮೋದಿ ಹಾಗೂ ಇತರರು ಮಾತನಾಡಿದ್ದಾರೆಯೇ.? ಪ್ರತಿ ಜೀವಕ್ಕೂ ಬೆಲೆಯಿದೆ ಅದನ್ನು ರಾಜಕೀಯವಾಗಿ ಬಳಸಿಕೊಳ್ಳಬೇಡಿ’ ಎಂದು ಜಗ್ಗೇಶ್‌ ಟ್ವೀಟ್‌ಗೆ ಕೆಲವರು ಪ್ರತಿಕ್ರಿಯಿಸಿದ್ದಾರೆ.

ಪ್ರತಿಕ್ರಿಯಿಸಿ (+)