ಮಂಗಳವಾರ, ಡಿಸೆಂಬರ್ 10, 2019
20 °C

ಕ್ರಿಕೆಟಿಗ ಮಯಂಕ್ ಅಗರ್‌ವಾಲ್–ಆಶಿತಾ ನಿಶ್ಚಿತಾರ್ಥ

Published:
Updated:
ಕ್ರಿಕೆಟಿಗ ಮಯಂಕ್ ಅಗರ್‌ವಾಲ್–ಆಶಿತಾ ನಿಶ್ಚಿತಾರ್ಥ

ಬೆಂಗಳೂರು: ಕರ್ನಾಟಕದ ಕ್ರಿಕೆಟ್ ಆಟಗಾರ ಮಯಂಕ್ ಅಗರ್‌ವಾಲ್ ತಮ್ಮ ದೀರ್ಘಕಾಲದ ಗೆಳತಿ ಆಶಿತಾ ಸೂದ್‌ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ಮಯಂಕ್ ಅಗರ್‌ವಾಲ್ ತಮ್ಮ ನಿಶ್ಚಿತಾರ್ಥದ ಚಿತ್ರವನ್ನು ಟ್ವಿಟರ್‌ ಖಾತೆಯಲ್ಲಿ ಪ್ರಕಟಿಸಿದ್ದು, ''ಅಧಿಕೃತವಾಗಿ ನಿಶ್ಚಿತಾರ್ಥ ನಡೆದಿದೆ'' ಎಂದು ಬರೆದುಕೊಂಡಿದ್ದಾರೆ.

ಕಳೆದ ಡಿಸೆಂಬರ್‌ 29ರಂದು ಲಂಡನ್‌ನ ಥೇಮ್ಸ್‌ ನದಿ ತಟದಲ್ಲಿರುವ 'ದಿ ಲಂಡನ್‌ ಐ' ಮನರಂಜನಾ ಪಾರ್ಕ್‌ನಲ್ಲಿ ಗೆಳತಿ ಆಶಿತಾ ಸೂದ್‌ ಅವರಿಗೆ ತಮ್ಮ ಪ್ರೇಮ ನಿವೇದನೆ ಮಾಡಿಕೊಂಡಿದ್ದರು. ಸಾಮಾಜಿಕ ಜಾಲತಾಣಗಳಾದ ಟ್ವಿಟರ್‌ ಹಾಗೂ ಇನ್ಸ್‌ಟಾಗ್ರಾಮ್‌ನಲ್ಲಿ ಆಶಿತಾ ಜೊತೆಗಿರುವ ಕೆಲವು ಚಿತ್ರಗಳನ್ನು ಪ್ರಕಟಿಸಿ   ''ನನ್ನ ಪ್ರೇಮ ನಿವೇದನೆಗೆ ಆಕೆ ಒಪ್ಪಿಗೆ ಸೂಚಿಸಿದಳು'' ಎಂದು ಬರೆದುಕೊಂಡಿದ್ದಾರೆ.

ಮಯಾಂಕ್‌ ಹಾಗೂ ಆಶಿತಾ ಕುಟುಂಬದವರು ಹಲವು ವರ್ಷಗಳಿಂದ ಕುಟುಂಬ ಸ್ನೇಹಿತರು. ಹಾಗಾಗಿ ಅವರ ಪ್ರೇಮಕ್ಕೆ ಎರಡೂ ಕುಟುಂಬಗಳು ಒಪ್ಪಿಗೆ ಸೂಚಿಸಿವೆ. ಇನ್ನು ಕೆಲವು ದಿನಗಳಲ್ಲಿ ಮಯಾಂಕ್ ಮತ್ತು ಆಶಿತಾ ವಿವಾಹ ನೆರವೇರಲಿದೆ ಎಂದು ಮೂಲಗಳು ತಿಳಿಸಿವೆ. ಆಶಿತಾ ರಾಜ್ಯದ ಹಿರಿಯ ಪೊಲೀಸ್‌ ಅಧಿಕಾರಿ ಪ್ರವೀಣ್ ಸೂದ್ ಅವರ ಪುತ್ರಿ.

ಪ್ರತಿಕ್ರಿಯಿಸಿ (+)