ಬಿಎಫ್‌ಸಿ–ಎಟಿಕೆ ಮುಖಾಮುಖಿ

7
ಐಎಸ್‌ಎಲ್‌ನಲ್ಲಿ ನಿರಂತರ ಎರಡು ಗೆಲುವು ಕಂಡ ಸುನಿಲ್ ಚೆಟ್ರಿ ಬಳಗಕ್ಕೆ ಗೆಲುವಿನ ವಿಶ್ವಾಸ

ಬಿಎಫ್‌ಸಿ–ಎಟಿಕೆ ಮುಖಾಮುಖಿ

Published:
Updated:
ಬಿಎಫ್‌ಸಿ–ಎಟಿಕೆ ಮುಖಾಮುಖಿ

ಕೋಲ್ಕತ್ತಾ: ಪಾಯಿಂಟ್‌ ಪಟ್ಟಿಯ  ಅಗ್ರಸ್ಥಾನದಲ್ಲಿರುವ ಬೆಂಗ ಳೂರು ಫುಟ್‌ಬಾಲ್ ಕ್ಲಬ್‌ (ಬಿಎಫ್‌ಸಿ) ಮತ್ತು ಚಾಂಪಿಯನ್‌ ಅಟ್ಲೆಟಿಕೊ ಕೋಲ್ಕತ್ತ (ಎಟಿಕೆ) ತಂಡಗಳು ಇಂಡಿಯನ್ ಸೂಪರ್ ಲೀಗ್‌ನ (ಐಎಸ್‌ಎಲ್) ಪಂದ್ಯದಲ್ಲಿ ಶನಿವಾರ ಮುಖಾಮುಖಿಯಾಗಲಿವೆ.

ಸತತ ಮೂರು ಪಂದ್ಯಗಳ ಸೋಲಿ ನಿಂದ ಮಂಕಾಗಿದ್ದ ಎಟಿಕೆ ಕಳೆದ ಪಂದ್ಯದಲ್ಲಿ ಗೆದ್ದು ಭರವಸೆಯ ಹಳಿಗೆ ಮರಳಿದೆ. ನಿರಂತರ ಎರಡು ಜಯ ಸಾಧಿಸಿರುವ ಬಿಎಫ್‌ಸಿ ಹ್ಯಾಟ್ರಿಕ್ ಜಯದ ಕನಸು ಕಾಣುತ್ತಿದೆ. ಈ ತಂಡವನ್ನು ಎಟಿಕೆ ತವರಿನಲ್ಲಿ ಮಣಿಸುವುದೇ ಎಂಬುದನ್ನು ಕಾದುನೋಡಬೇಕಾಗಿದೆ.

ಕಳೆದ ಋತುವಿನಲ್ಲಿ ಅಮೋಘ ಸಾಮರ್ಥ್ಯ ತೋರಿದ ಎಟಿಕೆ ಈ ಬಾರಿ ಸೋಲಿನ ಸರಪಳಿಯಲ್ಲಿ ಸಿಲುಕಿದೆ. ಪಾಯಿಂಟ್ ಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿರುವ ತಂಡ ಮೊದಲ ನಾಲ್ಕರಲ್ಲಿ ಸ್ಥಾನ ಗಳಿಸಬೇಕಾದರೆ ನಿರಂತರ ಗೆಲ್ಲುವ ಅಗತ್ಯವಿದೆ. ತಂಡಕ್ಕೆ ಉಳಿದಿರುವುದು ಆರು ಪಂದ್ಯಗಳು ಮಾತ್ರ. ಈ ಸ್ಥಿತಿಯನ್ನು ನಿಭಾಯಿಸಬೇಕಾ ದರೆ ತಂಡ ಶನಿವಾರದ ಪಂದ್ಯದಲ್ಲಿ ಗೆಲ್ಲಲೇ ಬೇಕಾದ ಅನಿವಾರ್ಯ ಸ್ಥಿತಿಗೆ ಸಿಲುಕಿದೆ.

‘ಲೆಕ್ಕಾಚಾರದಲ್ಲಿ ನಮ್ಮ ತಂಡ ಮುಂದೆ ಇದೆ. ಮುಂದಿನ ಆರೂ ಪಂದ್ಯ ಗಳಲ್ಲಿ ಗೆದ್ದರೆ ಪಾಯಿಂಟ್‌ ಪಟ್ಟಿಯಲ್ಲಿ ಅಗ್ರ ನಾಲ್ಕರಲ್ಲಿ ಸ್ಥಾನ ಗಳಿಸಲು ಸಾಧ್ಯವಿದೆ. ವೃತ್ತಿಪರ ಆಟಗಾರರು ಇರುವುದರಿಂದ ಶನಿವಾರ ಗೆದ್ದು ಮೂರು ಪಾಯಿಂಟ್‌ಗಳನ್ನು ಬಗಲಿಗೆ ಹಾಕಿಕೊಳ್ಳಲಿದ್ದೇವೆ’ ಎಂದು ಎಟಿಕೆ ತಂಡದ ಮಧ್ಯಂತರ ಕೋಚ್‌ ಆ್ಯಶ್ಲೆ ವೆಸ್ಟ್‌ವುಡ್‌ ಭರವಸೆ ವ್ಯಕ್ತಪಡಿಸಿದರು.

ಅಗ್ರಸ್ಥಾನ ಉಳಿಸಿಕೊಳ್ಳುವ ಗುರಿ

ಬಿಎಫ್‌ಸಿ ತಂಡ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನ ಉಳಿಸಿಕೊಂಡು ಪ್ಲೇ ಆಫ್‌ ಹಂತದ ಕಡೆಗೆ ಸುಲಭ ಹೆಜ್ಜೆ ಹಾಕುವ ಗುರಿಯೊಂದಿಗೆ ಇಲ್ಲಿಗೆ ಬಂದಿದೆ.

‘ಎಟಿಕೆ ತಂಡ ಈ ಬಾರಿ ಉತ್ತಮ ಆಟ ಆಡುತ್ತಿಲ್ಲ. ಹಾಗೆಂದು ತಂಡವನ್ನು ನಾವು ಹಗುರವಾಗಿ ಕಾಣುವುದಿಲ್ಲ. ಗೆಲ್ಲುವುದೊಂದೇ ನಮ್ಮ ಗುರಿ’ ಎಂದು ಬಿಎಫ್‌ಸಿ ಕೋಚ್‌ ಆಲ್ಬರ್ಟ್‌ ರೋಕಾ ಹೇಳಿದರು.

ಬೆಂಗಳೂರಿನಲ್ಲಿ ಮಂಗಳವಾರ ನಡೆದ ಎಎಫ್‌ಸಿ ಕಪ್‌ ಪಂದ್ಯದಲ್ಲಿ ಟ್ರಾನ್ಸ್‌ಪೋರ್ಟ್ ಯುನೈಟೆಡ್ ವಿರುದ್ಧ 3-0 ಅಂತರದ ಜಯಿಸಿ ಆತ್ಮವಿಶ್ವಾಸದಲ್ಲಿರುವ ಬಿಎಫ್‌ಸಿ ಇದಕ್ಕೂ ಮೊದಲು ನಡೆದ ಎರಡು ಐಎಸ್‌ಎಲ್ ಪಂದ್ಯಗಳಲ್ಲೂ ಗೆದ್ದಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry