ಬುಧವಾರ, ಡಿಸೆಂಬರ್ 11, 2019
16 °C

ಪರೀಕ್ಷೆಗೆ ನಿರಾಕರಣೆ ವಿದ್ಯಾರ್ಥಿನಿ ಆತ್ಮಹತ್ಯೆ

ಪಿಟಿಐ Updated:

ಅಕ್ಷರ ಗಾತ್ರ : | |

ಪರೀಕ್ಷೆಗೆ ನಿರಾಕರಣೆ ವಿದ್ಯಾರ್ಥಿನಿ ಆತ್ಮಹತ್ಯೆ

ಹೈದರಾಬಾದ್‌  : ಶಾಲಾ ಶುಲ್ಕ ಪಾವತಿಸಿಲ್ಲವೆಂದು ಪರೀಕ್ಷೆ ಬರೆಯಲು ಅವಕಾಶ ನಿರಾಕರಿಸಿದ ಶಾಲಾ ಆಡಳಿತ ಮಂಡಳಿ ನಿರ್ಧಾರದಿಂದ ಬೇಸತ್ತ 9ನೇ ತರಗತಿ ವಿದ್ಯಾರ್ಥಿನಿಯು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

‘ಶುಲ್ಕ ಪಾವತಿಸದ ವಿಚಾರವನ್ನು ಸಹ‍ಪಾಠಿಗಳ ಮುಂದೆ ವಿಷಯ ಪ್ರಸ್ತಾಪಿಸಿ ಅವಮಾನ ಮಾಡಿದರು, ಅಮ್ಮಾ ನನ್ನನ್ನು ಕ್ಷಮಿಸು’ ಎಂದು ಸಾಯಿ ದೀಪ್ತಿ ಬರೆದಿಟ್ಟಿದ್ದಾಳೆ.

‘ಶಾಲಾ ಆಡಳಿತ ಮಂಡಳಿ ಸಿಬ್ಬಂದಿಯನ್ನು ಬುಧವಾರ ಭೇಟಿಯಾಗಿದ್ದ ಬಾಲಕೃಷ್ಣ ಅವರು ಫೆಬ್ರುವರಿ ಮೊದಲ ವಾರದಲ್ಲಿ ಮಗಳ ಶಾಲಾ ಶುಲ್ಕ ₹2ಸಾವಿರ ಪಾವತಿಸುವುದಾಗಿ ತಿಳಿಸಿದ್ದರು. ಹೀಗಿದ್ದರೂ, ಇದೇ ವಿಷಯ ಪ್ರಸ್ತಾಪಿಸಿ ಶಾಲಾ ಆಡಳಿತ ಮಂಡಳಿ ಮರುದಿನ ವಿದ್ಯಾರ್ಥಿನಿಗೆ ಅವಮಾನ ಮಾಡಿದ್ದರು. ಇದರಿಂದ ತೀವ್ರ ಬೇಸರಗೊಂಡ ವಿದ್ಯಾರ್ಥಿನಿ ಸಂಜೆ 4.30ರ ವೇಳೆಗೆ ಶಾಲೆಯಿಂದ ಹಿಂತಿರುಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ತಾಯಿ ಸುನೀತಾ ಕೆಲಸ ಮುಗಿಸಿ ಮನೆಗೆ ಬಂದ ವೇಳೆ ಮಗಳು ಆತ್ಮಹತ್ಯೆಗೆ ಮುಂದಾಗಿದ್ದು ಗೊತ್ತಾಗಿದೆ’ ಎಂದು ಮಲ್ಕಾಜ್‌ಗಿರಿ ಪೊಲೀಸರು ತಿಳಿಸಿದ್ದಾರೆ.

ಆರೋಪ ನಿರಾಕರಣೆ: ‘ಸಾಯಿದೀಪ್ತಿ ಸೇರಿದಂತೆ ಶುಲ್ಕ ಪಾವತಿಸದ ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡಲಾಗಿತ್ತು, ಯಾರಿಗೂ ಪರೀಕ್ಷೆ ಬರೆಯಲು ನಿರಾಕರಿಸಿರಲಿಲ್ಲ’ ಎಂದು ಶಾಲಾ ಆಡಳಿತ ಮಂಡಳಿ ಸ್ಪಷ್ಟನೆ ನೀಡಿದೆ.

ಪ್ರತಿಕ್ರಿಯಿಸಿ (+)