ಬುಧವಾರ, ಡಿಸೆಂಬರ್ 11, 2019
16 °C

ಮೊಬೈಲ್‌ ಫೋಟೊ ಸ್ಪರ್ಧೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೊಬೈಲ್‌ ಫೋಟೊ ಸ್ಪರ್ಧೆ

ಬೆಂಗಳೂರು: ಚೆನ್ನೈನ ಅಮೆರಿಕ ಕಾನ್ಸಲೇಟ್ ಜನರಲ್ ಕಚೇರಿಯು ಮೊಬೈಲ್ ಫೋನ್ ಫೊಟೊ ಸ್ಪರ್ಧೆ ಆಯೋಜಿಸಿದೆ. ಫೆಬ್ರುವರಿ 1ರಿಂದ ಫೆಬ್ರುವರಿ 15ರವರೆಗೆ ಪ್ರವೇಶಗಳನ್ನು ಕಳುಹಿಸಬಹುದು. ತಮಿಳುನಾಡು, ಕರ್ನಾಟಕ, ಕೇರಳ, ಪುದುಚೇರಿ, ಅಂಡಮಾನ್–ನಿಕೋಬಾರ್‌ ನಿವಾಸಿಗಳು ಇದರಲ್ಲಿ ಭಾಗಿಯಾಗಬಹುದು.

‘ನನಗೆ ಸ್ಫೂರ್ತಿ ತುಂಬಿದ ಮಹಿಳೆ’ (ವುಮನ್ ಹು ಇನ್‌ಸ್ಪೈರ್ಸ್‌ ಮಿ) ವಿಷಯದ ಅಡಿ ಮೊಬೈಲ್ ಫೋನ್‌ನಲ್ಲಿ ತೆಗೆದ ಮೂರು ಫೋಟೊಗಳನ್ನು ಸ್ಪರ್ಧೆಗೆ ಕಳುಹಿಸಬೇಕು.

ಈ ಚಿತ್ರಗಳು ಪರಿಶ್ರಮ, ಧೈರ್ಯ ಹಾಗೂ ಪ್ರಗತಿಯನ್ನು ಪ್ರತಿಫಲಿಸುವಂತಿರಬೇಕು.

ಅರ್ಜಿಗಳನ್ನು ಖ್ಯಾತ ಛಾಯಾಚಿತ್ರಗ್ರಾಹಕರು ಹಾಗೂ ತಜ್ಞರು ಆಯ್ಕೆ ಮಾಡಲಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಆನ್‌ಲೈನ್ ಮತದಾನದ ಮೂಲಕ ಮೂವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ. ಪ್ರಶಸ್ತಿ ಗೆದ್ದ ಫೋಟೊಗಳನ್ನು ಅಮೆರಿಕನ್ ಸೆಂಟರ್‌ನಲ್ಲಿ ಪ್ರದರ್ಶಿಸಲಾಗುತ್ತದೆ. ಪ್ರಮಾಣಪತ್ರ ನೀಡಲಾಗುತ್ತದೆ.

ಮಾರ್ಚ್ ತಿಂಗಳಿಡೀ ಶಾಲಾ ಕಾಲೇಜುಗಳು, ಶಾಪಿಂಗ್ ಮಾಲ್‌ಗಳಲ್ಲಿ ಈ ಚಿತ್ರಗಳನ್ನು ಪ್ರದರ್ಶಿಸಲಾಗುತ್ತದೆ. ಪ್ರವೇಶ ಉಚಿತ. ಹೆಚ್ಚಿನ ಮಾಹಿತಿಗೆ ವೆಬ್‌ಸೈಟ್ https://www.facebook.com/chennai.usconsulate/events/

ಪ್ರತಿಕ್ರಿಯಿಸಿ (+)