ಗ್ರಹಣ: ನೀರಿನಲ್ಲಿ ಕುಳಿತ ಮಹಿಳೆ

7

ಗ್ರಹಣ: ನೀರಿನಲ್ಲಿ ಕುಳಿತ ಮಹಿಳೆ

Published:
Updated:

ಕುರುಗೋಡು: ಇಲ್ಲಿಗೆ ಸಮೀಪದ ಕುಡಿತಿನಿಯಲ್ಲಿ ಬುಧವಾರ ಚಂದ್ರ ಗ್ರಹಣದ ಆರಂಭದಿಂದ ಕೊನೆಯವರೆಗೂ 6ನೇ ವಾರ್ಡಿನ ನಿವಾಸಿ ಮಹಾದೇವಮ್ಮ ನೀರಿನ ತೊಟ್ಟಿಯಲ್ಲಿ ಕುಳಿತು ಪ್ರಾರ್ಥನೆ ಮಾಡಿ ಅಚ್ಚರಿ ಮೂಡಿಸಿದರು.

ಮನೆಯ ಮುಂಭಾಗದ ನೀರಿನ ತೊಟ್ಟಿಯಲ್ಲಿ ಸಂಜೆ 5.15 ರಿಂದ ರಾತ್ರಿ 8.50ರ ವರೆಗೆ ತಲೆಯ ಮೇಲೆ ಸೀರೆಯ ಸೆರಗು ಹಾಕಿಕೊಂಡು ಅವರು ಧ್ಯಾನ ಮಾಡಿದರು. ಕತ್ತಿನವರೆಗೂ ಅವರು ಮುಳುಗಿದ್ದರು.

ಗ್ರಹಣದಿಂದ ಸಮಾಜಕ್ಕೆ ಕೆಡುಕು ಉಂಟಾಗಬಾರದು ಎಂಬ ಉದ್ದೇಶದಿಂದ ಪ್ರಾರ್ಥನೆ ಮಾಡಿದ್ದಾಗಿ ತಿಳಿಸಿದರು. ‘ಅತ್ಯಾಧುನಿಕ ಯುಗದಲ್ಲೂ ಇಂಥ ಮೂಢ ಆಚರಣೆಗಳಿರುವುದು ವಿಪರ್ಯಾಸ’ ಎಂದು ಪ್ರತ್ಯಕ್ಷ್ಯದರ್ಶಿ ಕಾಮೇಶ್ ಅಭಿಪ್ರಾಯಪಟ್ಟರು. ಅಂಗನವಾಡಿ ಕಾರ್ಯಕರ್ತೆಯಾಗಿದ್ದ ಮಹಾದೇವಮ್ಮ 3 ವರ್ಷದ ಹಿಂದೆ ಸ್ವಯಂ ನಿವೃತ್ತಿ ಪಡೆದಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry