ಕೇಂದ್ರ ಸರ್ಕಾರದ ಪ್ರತಿಕೃತಿ ದಹಿಸಿ ಪ್ರತಿಭಟನೆ

7

ಕೇಂದ್ರ ಸರ್ಕಾರದ ಪ್ರತಿಕೃತಿ ದಹಿಸಿ ಪ್ರತಿಭಟನೆ

Published:
Updated:

ಚಿತ್ತಾಪುರ: ಕೇಂದ್ರ ಸರ್ಕಾರ ಗುರು ವಾರ ಮಂಡಿಸಿದ 2018-19ನೇ ಸಾಲಿನ ಬಜೆಟ್‌ನಲ್ಲಿ ಅಂಗನವಾಡಿ ಕೇಂದ್ರಗಳ ಮತ್ತು ಕಾರ್ಯಕರ್ತೆಯರನ್ನು ಕಡೆಗಣಿಸಿ, ನಿರ್ಲಕ್ಷಿಸಿದೆ ಎಂದು ಆರೋಪಿಸಿ ಅಂಗನವಾಡಿ ಕಾರ್ಯಕರ್ತೆಯರ ತಾಲ್ಲೂಕು ಸಂಘದ ಅಧ್ಯಕ್ಷೆ ದೇವಮ್ಮ ಅನ್ನದಾನಿ ನೇತೃತ್ವದಲ್ಲಿ ಶುಕ್ರವಾರ ಕಾರ್ಯಕರ್ತೆಯರು ಕೇಂದ್ರ ಸರ್ಕಾರದ ಪ್ರತಿಕೃತಿ ದಹಿಸಿ ದಿಢೀರ್ ಪ್ರತಿಭಟನೆ ಮಾಡಿದರು.

ಈ ಮೊದಲು ಕೇಂದ್ರ ಸರ್ಕಾರದಿಂದ ಅಂಗನವಾಡಿ ಕಾರ್ಯಕರ್ತೆಯರಿಗೆ ₹3 ಸಾವಿರ ಗೌರವಧನ ಬರುತ್ತಿತ್ತು. 2017ರ ಬಜೆಟ್‌ನಲ್ಲಿ ಐಸಿಡಿಎಸ್ ಅಡಿಯಲ್ಲಿ ಅನುದಾನ ಕಡಿಮೆ ಮಾಡಿದ್ದರಿಂದ ಕಾರ್ಯಕರ್ತೆಯರಿಗೆ ₹1,800 ಗೌರವ ಧನ ಬರುತ್ತಿದೆ. 2018ರ ಬಜೆಟ್‌ನಲ್ಲೂ ಅನುದಾನ ಹೆಚ್ಚಳ ಮಾಡಿಲ್ಲ ಎಂದು ಕಾರ್ಯಕರ್ತೆಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

‘ಐಸಿಡಿಎಸ್ ಯೋಜನೆಯಡಿ ಅನುದಾನ ಹೆಚ್ಚಳ ಮಾಡಬೇಕು ಹಾಗೂ ಕನಿಷ್ಠ ಕೂಲಿ ₹18,000 ಕೊಡಬೇಕು ಎಂದು ಜನವರಿ 17ರಂದು ಮಂತ್ರಿಗಳ ಮನೆ ಎದುರಲ್ಲಿ ಪ್ರತಿಭಟನೆ ನಡೆಸಲಾಗಿದೆ. ಆದರೂ, ಸಹ ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆಗಳಿಗೆ ಸ್ಪಂದನೆ ಮಾಡಿಲ್ಲ’ ಎಂದು ಸಂಘದ ತಾಲ್ಲೂಕು ಅಧ್ಯಕ್ಷೆ ದೇವಮ್ಮ ಅನ್ನದಾನಿ ಆರೋಪಿಸಿದರು.

‘ಎಲ್ಲಾ ಯೋಜನೆಗಳಲ್ಲಿ ದುಡಿಯುವ ಸೇವಕರನ್ನು ಕಾರ್ಮಿಕರೆಂದು ಗುರುತಿಸ ಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಸರ್ಕಾರವು ಕಾರ್ಯ ಕರ್ತೆಯರ ಗೌರವಧನ ಹೆಚ್ಚಳ ಮಾಡಿಲ್ಲ. ಐಸಿಡಿಎಸ್ ಅನುದಾನ ವನ್ನೂ ಹೆಚ್ಚಳ ಮಾಡಿಲ್ಲ. ಅಂಗನವಾಡಿ ಯೋಜನೆಯನ್ನು ಖಾಸಗೀಕರಣ ಮಾಡಲು ತಂತ್ರಗಾರಿಕೆ ನಡೆಸುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿ ದರು.

‘ಕೇಂದ್ರ ಸರ್ಕಾರವು ದುಡಿಯುವ ವರ್ಗವನ್ನು ಲಘುವಾಗಿ ಪರಿಗಣಿಸಿ ಕಡೆಗಣಿಸುತ್ತಿದೆ. ಸರ್ಕಾರ ಮಂಡಿಸಿರುವ ಬಜೆಟ್ ಬಲವಾಗಿ ವಿರೋಧಿಸುತ್ತೇವೆ. ಕೇಂದ್ರ ಸರ್ಕಾರ ತಕ್ಷಣ ಎಚ್ಚೆತ್ತುಕೊಂಡು ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಹೆಚ್ಚಿಸಬೇಕು. ಐಸಿಡಿಎಸ್ ಅನುದಾನ ಹೆಚ್ಚಿಸಬೇಕು. ಮುಂಬರುವ ದಿನಗಳಲ್ಲಿ ಸರ್ಕಾರದ ವಿರುದ್ಧ ಉಗ್ರ ಪ್ರತಿಭಟನೆ ನಡೆಸುವುದು ಅನಿವಾರ್ಯ ವಾಗಿದೆ’ ಎಂದು ಎಚ್ಚರಿಸಿದರು.

ತಹಶೀಲ್ದಾರ್ ಕಚೇರಿ ಮುಂಭಾಗದ ಮುಖ್ಯರಸ್ತೆಯಲ್ಲಿ ಕಾರ್ಯಕರ್ತೆಯರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಗಳನ್ನು ಕೂಗುತ್ತಾ ಪ್ರತಿಕೃತಿ ದಹಿಸಿದರು. ಪ್ರತಿಭಟನೆಯಲ್ಲಿ ಸಂಘದ ಗೌರವಾಧ್ಯಕ್ಷೆ ಶಾಂತಾ ಗಾಯಕ ವಾಡ, ಕಾರ್ಯದರ್ಶಿ ಮಹಾನಂದ, ಖಜಾಂಚಿ ಪಾರ್ವತಿ, ಜ್ಯೋತಿ ರಾಠೋಡ್, ಅಕ್ಕಮಹಾದೇವಿ, ಬಸಮ್ಮ ದಂಡೋತಿ, ರಾಧಾಬಾಯಿ ದಂಡೋತಿ ಹಾಗೂ ಅನೇಕ ಕಾರ್ಯಕರ್ತೆಯರು ಭಾಗವಹಿಸಿದ್ದರು.

* * 

ಅಂಗನವಾಡಿ ಕೇಂದ್ರಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಯ ಕರ್ತೆಯರನ್ನು ಸೇವಕರೆನ್ನುವ ಬದ ಲಾಗಿ ಕಾರ್ಮಿಕರು ಎಂದು ಸರ್ಕಾರ ಪರಿಗಣಿಸಬೇಕು.

ದೇವಮ್ಮ ಅನ್ನದಾನಿ, ಅಧ್ಯಕ್ಷೆ, ಅಂಗನವಾಡಿ ಕಾರ್ಯಕರ್ತೆಯರ ತಾಲ್ಲೂಕು ಸಂಘ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry