‘ಟಾರ್ಗೆಟ್ ಟೆನ್ ಥೌಸೆಂಡ್’ ಇಂದು ಕೊನೆ

7

‘ಟಾರ್ಗೆಟ್ ಟೆನ್ ಥೌಸೆಂಡ್’ ಇಂದು ಕೊನೆ

Published:
Updated:

ಚಿತ್ರದುರ್ಗ: ಇಲ್ಲಿನ ತರಾಸು ರಂಗಮಂದಿರದಲ್ಲಿ ಫೆ.3ರಂದು ಸಂಜೆ 4 ಕ್ಕೆ ‘ಟಾರ್ಗೆಟ್ ಟೆನ್ ಥೌಸೆಂಟ್’ ಅಭಿಯಾನದ ಸಮಾರೋಪ ಹಮ್ಮಿಕೊಳ್ಳಲಾಗಿದೆ ಎಂದು ಟಾರ್ಗೆಟ್ ತಂಡದ ಮುಖ್ಯಸ್ಥ ಸಿದ್ದರಾಜ್ ಜೋಗಿ ತಿಳಿಸಿದರು.

ಇಲ್ಲಿ 2017ರ ಜ.1ರಿಂದ ಡಿ.31 ರವರೆಗೆ 9,999 ಸಸಿಗಳನ್ನು ನೆಡಲಾಗಿದೆ. ಅಂತಿಮ ಸಸಿಯನ್ನು ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ನೆಡಲಿದ್ದು, ಈ ಮೂಲಕ ಟಾರ್ಗೆಟ್ ಟೆನ್ ಥೌಸೆಂಡ್ ಅಭಿಯಾನ ಸಮಾರೋಪಗೊಳ್ಳಲಿದೆ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಕೇವಲ ಆರು ಮಂದಿಯ ತಂಡದಿಂದ ಪ್ರಾರಂಭವಾದ ಈ ಅಭಿಯಾನಕ್ಕೆ ಜನ ಉತ್ತಮ ರೀತಿಯ ಬೆಂಬಲ ನೀಡಿದ್ದಾರೆ. ಅದರ ಫಲವೇ ತಂಡದಲ್ಲಿ ಈಗ 60 ಮಂದಿ ಇದ್ದಾರೆ. ನಾವು ಪ್ರತಿ ಶನಿವಾರ ಮಧ್ಯಾಹ್ನದಿಂದ ಮತ್ತು ಭಾನುವಾರ ಇಡೀ ದಿನ ವಿವಿಧ ಬಡಾವಣೆಗಳಲ್ಲಿ ಸಸಿ ನೆಡುವ ಕೆಲಸ ಮಾಡಿದ್ದೇವೆ. ಅಷ್ಟೇ ಅಲ್ಲದೆ, ಕೆಲವೆಡೆ ಪೋಷಣೆ ಸಹ ಮಾಡುತ್ತಿದ್ದೇವೆ’ ಎಂದರು.

ಕಬೀರಾನಂದಾಶ್ರಮದ →ಶಿವಲಿಂಗಾನಂದ ಸ್ವಾಮೀಜಿ ನೇತೃತ್ವ ವಹಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಎಚ್.ಆಂಜನೇಯ, ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್, ಸದಸ್ಯ ಕೆಜಿಟಿ ಗುರುಮೂರ್ತಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಾಥ್ ಎಂ.ಜೋಷಿ, ನಗರಸಭೆ ಅಧ್ಯಕ್ಷ ಮಂಜುನಾಥ ಗೊಪ್ಪೆ, ಮಾಜಿ ಅಧ್ಯಕ್ಷರಾದ ಬಿ.ಕಾಂತರಾಜ್, ಡಿ.ಮಲ್ಲಿಕಾರ್ಜುನ್, ಪೌರಾಯುಕ್ತ ಚಂದ್ರಪ್ಪ ಭಾಗವಹಿಸಲಿದ್ದಾರೆ ಎಂದರು.

ಇದೇ ಸಂದರ್ಭದಲ್ಲಿ ವಾಸವಿ ಮೆಲೋಡಿಸ್ ತಂಡದಿಂದ ಕರೋಕೆ ಗಾಯನ, ನಾಟ್ಯ ರಂಜನಿ ಕಲಾ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ಅಭಿಯಾನಕ್ಕೆ ಸಹಕರಿಸಿದ ಪ್ರತಿಯೊಬ್ಬರನ್ನು ವೇದಿಕೆಯಲ್ಲಿ ಸನ್ಮಾನಿಸಲಾಗುತ್ತದೆ ಎಂದು ತಿಳಿಸಿದರು. ಶಿವು, ಅಜೇಯ್, ಗಂಗಾಧರ್, ಶಶಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry