7

‘ಪ್ಯಾಡ್ ಮ್ಯಾನ್‌’ ಸವಾಲಿಗೆ ಬಾಲಿವುಡ್‌ ಸ್ಪಂದನೆ: ಸ್ಯಾನಿಟರಿ ನ್ಯಾಪ್ಕಿನ್ ಹಿಡಿದು ಫೋಟೋ ಪ್ರಕಟಿಸಿದ ಸ್ಟಾರ್‌ಗಳು

Published:
Updated:
‘ಪ್ಯಾಡ್ ಮ್ಯಾನ್‌’ ಸವಾಲಿಗೆ ಬಾಲಿವುಡ್‌ ಸ್ಪಂದನೆ: ಸ್ಯಾನಿಟರಿ ನ್ಯಾಪ್ಕಿನ್ ಹಿಡಿದು ಫೋಟೋ ಪ್ರಕಟಿಸಿದ ಸ್ಟಾರ್‌ಗಳು

ಬೆಂಗಳೂರು: ಋತುಸ್ರಾವದ ಮಾತು, ಚರ್ಚೆ ಎಂದರೆ ಇಂದಿಗೂ ಶ್‌..! ಆದರೆ, ದೇಶದ ಪ್ಯಾಡ್‌ ಮ್ಯಾನ್‌ ಖ್ಯಾತಿಯ ಅರುಣಾಚಲಂ ಮುರುಗನಂತಂ ಪ್ಯಾಡ್‌ ಹಿಡಿದಿರುವ ಫೋಟೋ ಪ್ರಕಟಿಸಿ, ಬಾಲಿವುಡ್‌ ಸೆಲೆಬ್ರಿಟಿಗಳ ಮುಂದೆ ಸವಾಲಿಟ್ಟಿದ್ದಾರೆ.

ತನ್ನ ಪತ್ನಿ ಋತುಸ್ರಾವದ ಸಮಯದಲ್ಲಿ ಎದುರಿಸುತ್ತಿದ್ದ ಸಮಸ್ಯೆಗೆ ಪರಿಹಾರ ಕಂಡುಹಿಡಿಯಲು ಶ್ರಮಿಸಿ, ಸ್ಯಾನಿಟರಿ ನ್ಯಾಪ್ಕಿನ್‌ ತಯಾರಿಸುವ ಯಂತ್ರವನ್ನೇ ಅಭಿವೃದ್ಧಿ ಪಡಿಸಿದ ಮುರುಗನಂತಂ ಕಥೆಯೇ ಪ್ಯಾಡ್‌ ಮ್ಯಾನ್‌ ಸಿನಿಮಾ ರೂಪದಲ್ಲಿ ಇದೇ 9ರಂದು ತೆರೆಗೆ ಬರುತ್ತಿದೆ. ಇದೇ ಸಮಯದಲ್ಲಿ ಮಹಿಳೆಯ ಪರವಾಗಿ ನಿಲ್ಲುವಂತೆ, ಇದು ತಲೆತಗ್ಗಿಸುವ ಸಂಗತಿ ಅಲ್ಲ ಎಂಬುದನ್ನು ಸಮಾಜದ ಮುಂದಿಡಲು ಟ್ವಿಟರ್‌ನಲ್ಲಿ ಫೆ.1ರಂದು ಪ್ಯಾಡ್‌ಮ್ಯಾನ್‌ ಸವಾಲು (#PadManChallenge) ಹಾಕಿದ್ದಾರೆ.

ಬಾಲಿವುಡ್‌ನ ಮಿಸ್ಟರ್‌ ಪರ್ಫೆಕ್ಷನಿಸ್ಟ್‌ ಆಮಿರ್‌ ಖಾನ್‌, ಅಕ್ಷಯ್‌ ಕುಮಾರ್‌, ನಟಿ ಅಲಿಯಾ ಭಟ್‌, ಟ್ವಿಂಕಲ್‌ ಖನ್ನಾ, ಸೋನಂ ಕಪೂರ್‌, ರಾಧಿಕಾ ಆಪ್ಟೆ, ಶಬಾನಾ ಆಜ್ಮಿ ಸೇರಿ ಅನೇಕ ಗಣ್ಯರು ಸ್ಯಾನಿಟರಿ ನ್ಯಾಪ್ಕಿನ್‌ ಹಿಡಿದು ಫೋಟೋ ತೆಗೆದು ಟ್ವಿಟರ್‌ನಲ್ಲಿ ಪ್ರಕಟಿಸಿಕೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry