ಬುಧವಾರ, ಡಿಸೆಂಬರ್ 11, 2019
23 °C

ಪರೀಕ್ಷಾ ಒತ್ತಡದಿಂದ ಮುಕ್ತಿ ಹೇಗೆ? ವಿದ್ಯಾರ್ಥಿಗಳಿಗಾಗಿ ಪುಸ್ತಕ ಬರೆದಿದ್ದಾರೆ ಮೋದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪರೀಕ್ಷಾ ಒತ್ತಡದಿಂದ ಮುಕ್ತಿ ಹೇಗೆ? ವಿದ್ಯಾರ್ಥಿಗಳಿಗಾಗಿ ಪುಸ್ತಕ ಬರೆದಿದ್ದಾರೆ ಮೋದಿ

ನವದೆಹಲಿ: ಪರೀಕ್ಷಾ ದಿನಗಳು ಹತ್ತಿರ ಬರುತ್ತಿದ್ದಂತೆ ವಿದ್ಯಾರ್ಥಿಗಳು ಪರೀಕ್ಷಾ ಒತ್ತಡಕ್ಕೊಳಗಾಗುವುದು ಸಹಜ.ಇಂಥಾ ಒತ್ತಡಗಳಿಂದ ಹೊರಬರುವುದು  ಹೇಗೆ ಎಂಬುದರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ವಿದ್ಯಾರ್ಥಿಗಳಿಗಾಗಿ ಪುಸ್ತಕವೊಂದನ್ನು ಬರೆದಿದ್ದಾರೆ.ಎಕ್ಸಾಂ ವಾರಿಯರ್ಸ್ ಎಂಬ ಈ ಪುಸ್ತಕ ಶನಿವಾರ ಸಂಜೆ 4 ಗಂಟೆಗೆ ಲೋಕಾರ್ಪಣೆಯಾಗಿದೆ.

ಖ್ಯಾತ ಪ್ರಕಾಶನ ಸಂಸ್ಥೆ ಪೆಂಗ್ವಿನ್ ಬುಕ್ಸ್ ಈ ಪುಸ್ತಕವನ್ನು ಪ್ರಕಟಿಸಿದ್ದು, ಇದು ಇಂಗ್ಲಿಷ್ ಭಾಷೆಯಲ್ಲಿದೆ. ಇನ್ನಿತರ ಭಾಷೆಗಳಲ್ಲಿಯೂ ಈ ಪುಸ್ತಕವನ್ನು ಹೊರತರಲಾಗುವುದು ಎಂದು ಕಳೆದ ಜುಲೈ ತಿಂಗಳಲ್ಲಿ ಪಿಟಿಐ ವರದಿ ಮಾಡಿತ್ತು.

ಈ ಪುಸ್ತಕವು ತುಂಬಾ ಪ್ರಾಯೋಗಿಕ ವಿಷಯಗಳಿಂದ ಕೂಡಿದ್ದು, ಸ್ಫೂರ್ತಿದಾಯಕವಾಗಿರುತ್ತದೆ ಎಂದು ಪ್ರಕಾಶಕರು ಹೇಳಿದ್ದಾರೆ .

ಪ್ರತಿ ತಿಂಗಳ ಮನ್ ಕೀ ಬಾತ್  ಕಾರ್ಯಕ್ರಮಕ್ಕೆ ಉತ್ತಮ ಪ್ರತಿಕ್ರಿಯೆ ಲಭಿಸುತ್ತಿದ್ದುದರಿಂದ ವಿದ್ಯಾರ್ಥಿಗಳಿಗಾಗಿ ಈ ಪುಸ್ತಕ ಬರೆಯಲು ಮೋದಿ ತೀರ್ಮಾನಿಸಿದ್ದಾರೆ ಎಂದು ಪಿಟಿಐ ವರದಿಯಲ್ಲಿ ಹೇಳಲಾಗಿದೆ.

ಎಕ್ಸಾಂ ವಾರಿಯರ್ಸ್ ಜಗತ್ತಿನ ಎಲ್ಲ ಮಕ್ಕಳಿಗೂ ಈ ಪುಸ್ತಕ ಮಾರ್ಗದರ್ಶಿಯಾಗಲಿದೆ. ಒತ್ತಡವನ್ನು ಹೋಗಲಾಡಿಸಿ ಪರೀಕ್ಷೆಯನ್ನು ಎದುರಿಸುವುದು ಹೇಗೆ? ಮತ್ತು ಅಂಕಗಳೇ ಮುಖ್ಯ ಅಲ್ಲ, ಜ್ಞಾನ ಮತ್ತು ಕಲಿಕೆ ಮುಖ್ಯ ಎಂಬುದನ್ನು ಈ ಪುಸ್ತಕದಲ್ಲಿ ವಿವರಿಸಲಾಗಿದೆ ಎಂದು ಪ್ರಕಾಶಕರು ಹೇಳಿಕೆ ನೀಡಿದ್ದಾರೆ.

ಪ್ರತಿಕ್ರಿಯಿಸಿ (+)