ಶುಕ್ರವಾರ, ಡಿಸೆಂಬರ್ 6, 2019
24 °C

ಗೃಹ ಸಚಿವರಿಗೆ 'ಸ್ಕ್ರೂ ಡ್ರೈವರ್‌' ಕಳುಹಿಸಿ ರಾಜೀನಾಮೆಗೆ ಒತ್ತಾಯ: ಬಿಜೆಪಿ ಯುವ ಮೋರ್ಚಾ ಅಭಿಯಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗೃಹ ಸಚಿವರಿಗೆ 'ಸ್ಕ್ರೂ ಡ್ರೈವರ್‌' ಕಳುಹಿಸಿ ರಾಜೀನಾಮೆಗೆ ಒತ್ತಾಯ: ಬಿಜೆಪಿ ಯುವ ಮೋರ್ಚಾ ಅಭಿಯಾನ

ಬೆಂಗಳೂರು: ಬಿಜೆಪಿ ಕಾರ್ಯಕರ್ತ ಕೆ.ಸಂತೋಷ್‌ ಹತ್ಯೆ ಕುರಿತು ಗೃಹ ಸಚಿವ ರಾಮಲಿಂಗಾರೆಡ್ಡಿ ನೀಡಿದ್ದ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ, ಗೃಹ ಸಚಿವರ ವಿಳಾಸಕ್ಕೆ ಸ್ಕ್ರೂ ಡ್ರೈವರ್‌ ಕಳುಹಿಸಿ ಪ್ರತಿಭಟಿಸಲು ನಿರ್ಧರಿಸಿದೆ.

‘ಸ್ಕ್ರೂ ಡ್ರೈವರ್‌ನಿಂದ ಸುಮ್ಮನೆ ಚುಚ್ಚಿದ್ದಕ್ಕೆ ಸತ್ತಿದ್ದಾರೆ..’ ಎಂದು ಗೃಹ ಸಚಿವರು ಹೇಳಿರುವುದನ್ನು ಖಂಡಿಸಿ, ಗೃಹ ಸಚಿವರ ರಾಜೀನಾಮೆಗೆ ಬಿಜೆಪಿ ರಾಜ್ಯ ಘಟಕದ ಯುವ ಮೋರ್ಚಾ ಅಭಿಯಾನ(#ScrewedUpHomeMinister) ಪ್ರಾರಂಭಿಸಿದೆ.

ಕೊಲೆಯನ್ನು ಸಮರ್ಥಿಸಿಕೊಳ್ಳುತ್ತಿರುವ ಕಾಂಗ್ರೆಸ್‌ ಸರ್ಕಾರ ಜಿಹಾದಿಗಳಿಗೆ ಬೆಂಬಲ ಮುಂದುವರಿಸಿದೆ ಎಂದು ಬಿಜೆಪಿ ಆರೋಪಿಸಿದೆ.

ಬಿಜೆಪಿ ತನ್ನ ಟ್ವಿಟರ್‌ನಲ್ಲಿ ಗೃಹ ಸಚಿವ ರಾಮಲಿಂಗಾರೆಡ್ಡಿ ಅವರ ಬೆಂಗಳೂರಿನ ನಿವಾಸ ವಿಳಾಸ ಪ್ರಕಟಿಸಿ, ಅಲ್ಲಿಗೆ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಸ್ಕ್ರೂ ಡ್ರೈವರ್‌ ಕಳುಹಿಸಬಹುದು ಎಂದಿದೆ.

ಪ್ರತಿಕ್ರಿಯಿಸಿ (+)