ಗುರುವಾರ , ಡಿಸೆಂಬರ್ 12, 2019
26 °C

ದ್ರಾವಿಡ್‌‍ಗೆ ₹50 ಲಕ್ಷ, ಆಟಗಾರರಿಗೆ ₹30 ಲಕ್ಷ ಬಹುಮಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದ್ರಾವಿಡ್‌‍ಗೆ ₹50 ಲಕ್ಷ, ಆಟಗಾರರಿಗೆ ₹30 ಲಕ್ಷ ಬಹುಮಾನ

ಮುಂಬೈ: ನ್ಯೂಜಿಲೆಂಡ್‌ನಲ್ಲಿ ನಡೆದ 19 ವರ್ಷದೊಳಗಿನವರ ವಿಶ್ವಕಪ್ ಕ್ರಿಕೆಟ್ ಫೈನಲ್‌ನಲ್ಲಿ ಗೆದ್ದು ಚಾಂಪಿಯನ್ ಆಗಿ ಬೀಗಿದ ಕ್ರಿಕೆಟ್ ತಂಡಕ್ಕೆ ಬಿಸಿಸಿಐ ಬಹುಮಾನ ಘೋಷಿಸಿದೆ.

ಭಾರತದ ಕಿರಿಯರ ಕ್ರಿಕೆಟ್ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರಿಗೆ ₹50 ಲಕ್ಷ ಮತ್ತು ತಂಡದ ಪ್ರತಿಯೊಬ್ಬ ಸದಸ್ಯರಿಗೂ ₹30 ಲಕ್ಷ ಬಹುಮಾನವನ್ನು ನೀಡಲಾಗುವುದು.  ಅದೇ ವೇಳೆ ತಂದ ಸಪೋರ್ಟಿಂಗ್ ಸ್ಟಾಫ್‍ಗಳಿಗೆ ತಲಾ ₹20 ಲಕ್ಷ ನೀಡಲಾಗುವುದು ಎಂದು ಬಿಸಿಸಿಐ ಟ್ವೀಟ್ ಮಾಡಿದೆ.

ಪ್ರತಿಕ್ರಿಯಿಸಿ (+)