ಶುಕ್ರವಾರ, ಡಿಸೆಂಬರ್ 6, 2019
24 °C

ತಾತನ ಕೋಲು

Published:
Updated:
ತಾತನ ಕೋಲು

ತಾತನ ಕೋಲನು ಎಸೆದಿದ್ದೆ

ಏಳದ ತಾತನು ನಕ್ಕಿದ್ದ.

 

ತಾತನ ಚೀಲವ ಕದ್ದಿದ್ದೆ

ಕಾಡುತ ತಾತನ ಆಡಿಸಿದ್ದೆ.

ಆಡುತ ನಕ್ಕ ತಾತ

ಬಿದ್ದು ಬಿದ್ದು ನಕ್ಕರು.

 

ಮಲಗಿದ ತಾತನ ಏರಿದ್ದೆ

ಕುಣಿಯುತ ನಲಿದೆ ನಾನು.

ನೋವಲಿ ನಗುವ ತಾತನ ಕಂಡು

ಸಂಕಟ ಪಟ್ಟು ಪಕ್ಕಕೆ ಜಾರಿದ್ದೆ.

 

ತಾತನ ಕಿವಿಗೆ ಹೂವ ಮುಡಿಸಿ

ಚಪ್ಪಾಳೆ ತಟ್ಟಿದ್ದೆ.

ನಗುತಾ ತಲೆಯಾಡಿಸಿದಾತ

ನಗುವ ತರಿಸಿದ್ದ.

 

ತಾತನ ಬಳೆಯ ಜಗ್ಗಿದ್ದೆ

ಚಾಚಿದ ಕ್ಯೆ ಬರಲು ಹೆಣಗಿತ್ತು.

ನನ್ನ ಕುಣಿತಕೆ ತಾತನ ತಟ್ಟೆ

ಚಪ್ಪಾಳೆ ತಟ್ಟಿತ್ತು.

 

ಬಿದ್ದ ನನ್ನನು ಬಾಚಿ ಎತ್ತಿದ

ತಾತನ ಕ್ಯೆ ಸವರಿತ್ತು

ಬಾಗಿದ ತಾತನ ಬೆನ್ನ ಏರಿ

ಅಂಬಾರಿ ಹೊರಟಿದ್ದೆ.

 

ತಾತನ ಅಪ್ಪುಗೆ ಬಾಚಿ ತಬ್ಬಿತ್ತು

ತಾತನ ತೊಡೆಯೆ ತೊಟ್ಟಿಲು ಆಗಿತ್ತು

ತಾತನ ಗೊರಲು ಜೋಗುಳ ಹಾಡಿತ್ತು

ನಿದ್ದೆಗೆ ಜಾರಿದ ನನ್ನನು ಎತ್ತಿ ನಡೆದಳು

ಅಮ್ಮ ನಡುಮನೆಗೆ

ಪ್ರತಿಕ್ರಿಯಿಸಿ (+)