ಮಂಗಳವಾರ, ಡಿಸೆಂಬರ್ 10, 2019
20 °C

‘ತೇಜಸ್‌’ನಲ್ಲಿ ಹಾರಾಡಿದ ಅಮೆರಿಕ ವಾಯುಪಡೆ ಮುಖ್ಯಸ್ಥ

ಪಿಟಿಐ Updated:

ಅಕ್ಷರ ಗಾತ್ರ : | |

‘ತೇಜಸ್‌’ನಲ್ಲಿ ಹಾರಾಡಿದ ಅಮೆರಿಕ ವಾಯುಪಡೆ ಮುಖ್ಯಸ್ಥ

ಜೋಧ್‌ಪುರ,ರಾಜಸ್ಥಾನ : ಇಲ್ಲಿನ ವಾಯುನೆಲೆಯಲ್ಲಿ ಅಮೆರಿಕ ವಾಯುಪಡೆ ಮುಖ್ಯಸ್ಥ ಜನರಲ್‌ ಡೇವಿಡ್‌ ಎಲ್‌.ಗೋಲ್ಡ್‌ಫಿನ್‌ ಅವರು ಸ್ವದೇಶಿ ನಿರ್ಮಿತ ಯುದ್ಧವಿಮಾನ ‘ತೇಜಸ್‌’ನಲ್ಲಿ ಹಾರಾಟ ನಡೆಸಿದರು.

‘ಏರ್‌ವೈಸ್‌ ಮಾರ್ಷಲ್‌ ಎ.ಪಿ.ಸಿಂಗ್‌  ಜತೆಗೆ ಶುಕ್ರವಾರವೇ ಇಲ್ಲಿಗೆ ಬಂದಿದ್ದ ಅವರು, ಶನಿವಾರ ಸಹಪೈಲಟ್‌ ಜತೆಗೆ  ತೇಜಸ್‌ ವಿಮಾನದಲ್ಲಿ ಹಾರಾಟ ನಡೆಸಿದರು’ ಎಂದು ರಕ್ಷಣಾ ಇಲಾಖೆಯ ಅಧಿಕಾರಿಗಳು ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.

ಗೋಲ್ಡ್‌ಫಿನ್‌ ಅವರು ಶುಕ್ರವಾರ ಏರ್‌ಮೆನ್‌ ಹಾಗೂ ಪೈಲಟ್‌ಗಳ ಜತೆಗೂ ಸಂವಾದ ನಡೆಸಿದ್ದರು. ಇದೇ ವೇಳೆ ಮಾತನಾಡಿದ್ದ ಅವರು, ‘ಎರಡು ವಾಯುಪಡೆಗಳ ನಡುವೆ ಅತ್ಯಂತ ಗಟ್ಟಿಯಾದ ಬಾಂಧವ್ಯವಿದೆ’ ಎಂದಿದ್ದರು.

2016ರ ಜುಲೈನಲ್ಲಿ ತೇಜಸ್‌ನ ಮೊದಲ ತಂಡವನ್ನು ಭಾರತೀಯ ವಾಯುಸೇನೆಗೆ ಅಧಿಕೃತವಾಗಿ ಸೇರ್ಪಡೆಗೊಳಿಸಲಾಗಿತ್ತು.

ಪ್ರತಿಕ್ರಿಯಿಸಿ (+)