ಶುಕ್ರವಾರ, ಡಿಸೆಂಬರ್ 6, 2019
25 °C

ಏಕರೀತಿಯ ಮೌಲ್ಯಮಾಪನ ನೀತಿ ಹಿಂಪಡೆದ ಸಿಬಿಎಸ್‌ಇ

ಪಿಟಿಐ Updated:

ಅಕ್ಷರ ಗಾತ್ರ : | |

ಏಕರೀತಿಯ ಮೌಲ್ಯಮಾಪನ ನೀತಿ ಹಿಂಪಡೆದ ಸಿಬಿಎಸ್‌ಇ

ನವದೆಹಲಿ : 6ರಿಂದ 8ನೇ ತರಗತಿವರೆಗಿನ ಏಕರೀತಿಯ ಮೌಲ್ಯಮಾಪನ ನೀತಿಯನ್ನು ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿ (ಸಿಬಿಎಸ್‌ಇ) ಹಿಂದಕ್ಕೆ ಪಡೆದಿದೆ.

ಮೌಲ್ಯಮಾಪನ ನೀತಿಯಿಂದ ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯ (ಆರ್‌ಟಿಇ) ಉಲ್ಲಂಘನೆಯಾಗಿದೆ ಎಂದು ರಾಷ್ಟ್ರೀಯ ಮಾನವ ಹಕ್ಕು ಸಂರಕ್ಷಣಾ ಆಯೋಗ (ಎನ್‌ಸಿಪಿಸಿಆರ್‌) ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಈ ಕ್ರಮ ತೆಗೆದುಕೊಂಡಿರುವುದಾಗಿ ಅದು ತಿಳಿಸಿದೆ.

‘ಪರೀಕ್ಷೆ ಹಾಗೂ ಅಂಕಪಟ್ಟಿಯ ಏಕರೀತಿಯ ಮೌಲ್ಯಮಾಪನ ನೀತಿಯನ್ನು ತಕ್ಷಣಕ್ಕೆ ಹಿಂದಕ್ಕೆ ಪಡೆಯಲಾಗಿದೆ’ ಎಂದು ಸಿಬಿಎಸ್‌ಇ ಹೊರಡಿಸಿರುವ ಅಧಿಕೃತ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

10 ತರಗತಿ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ 6 ಹಾಗೂ 8ನೇ ತರಗತಿಯ ಪರೀಕ್ಷೆ ಮಾದರಿ, ಮೌಲ್ಯಮಾಪನ ಹಾಗೂ ಅಂಕಪಟ್ಟಿನಲ್ಲಿ ಏಕರೀತಿಯ ನೀತಿಯನ್ನು ಸಿಬಿಎಸ್‌ಇ ಜಾರಿಗೊಳಿಸಿತ್ತು.

ಪ್ರತಿಕ್ರಿಯಿಸಿ (+)