ಕಾಂಗ್ರೆಸ್‌ನ ಗವಿಯಪ್ಪ ಬಿಜೆಪಿಗೆ: ಶ್ರೀರಾಮುಲು

7

ಕಾಂಗ್ರೆಸ್‌ನ ಗವಿಯಪ್ಪ ಬಿಜೆಪಿಗೆ: ಶ್ರೀರಾಮುಲು

Published:
Updated:

ಹೊಸಪೇಟೆ: ಕಾಂಗ್ರೆಸ್ ಮುಖಂಡ ಎಚ್‌.ಆರ್‌.ಗವಿಯಪ್ಪ ಅವರು ಬಿಜೆಪಿ ಸೇರುವುದು ಖಚಿತ ಎಂದು ಸಂಸದ ಬಿ.ಶ್ರೀರಾಮುಲು ಶನಿವಾರ ಇಲ್ಲಿ ಹೇಳಿದರು.

‘ಗವಿಯಪ್ಪ ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ. ಅವರು ಕಾರ್ಯಕರ್ತರು ಮತ್ತು ಮುಖಂಡರ ಅಭಿಪ್ರಾಯ ಕೇಳುತ್ತಿದ್ದು, ವಿಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಅತ್ಯಂತ ಪ್ರಬಲ ಅಭ್ಯರ್ಥಿಯನ್ನೇ ಕಣಕ್ಕಿಳಿಸಲಾಗುವುದು’ ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಆನಂದ ಸಿಂಗ್‌ ಅವರು ಬಿಜೆಪಿಯಿಂದ ಎಲ್ಲವನ್ನೂ ಅನುಭವಿಸಿದ್ದಾರೆ. ಎರಡು ಅವಧಿಗೆ ಶಾಸಕ, ಸಚಿವರಾಗಿದ್ದಾರೆ. ಇಷ್ಟೆಲ್ಲ ಅಧಿಕಾರ ಸಿಕ್ಕರೂ ಪಕ್ಷ ಬದಲಿಸಿರುವುದು ಕಾರ್ಯಕರ್ತರಲ್ಲಿ ಬೇಸರ ಮೂಡಿಸಿದೆ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry