ಮಂಗಳವಾರ, ಡಿಸೆಂಬರ್ 10, 2019
21 °C
ರೋಹಿಣಿ ನಿಲೇಕಣಿ ಅಭಿಮತ

‘ನಂದನ್‌ ನಿಲೇಕಣಿ ರಾಜಕೀಯಕ್ಕೆ ಬರಲಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ನಂದನ್‌ ನಿಲೇಕಣಿ ರಾಜಕೀಯಕ್ಕೆ ಬರಲಿ’

ಹುಬ್ಬಳ್ಳಿ: ‘ಉತ್ತಮ ನಾಯಕರು, ಉತ್ತಮ ದೇಶ ನಿರ್ಮಾಣ ಮಾಡಬಲ್ಲರು. ನಂದನ್‌ರಂತಹ ನಾಯಕರು ರಾಜಕೀಯಕ್ಕೆ ಬರಬೇಕು’ ಎಂದು ಆರ್ಘ್ಯಂನ ಸಂಸ್ಥಾಪಕಿ, ನಂದನ್‌ ನಿಲೇಕಣಿಯವರ ಪತ್ನಿ ರೋಹಿಣಿ ಹೇಳಿದರು.

ನಗರದ ಇನ್ಫೊಸಿಸ್‌ ಆವರಣದಲ್ಲಿ ದೇಶಪಾಂಡೆ ಫೌಂಡೇಷನ್‌ ಶನಿವಾರ ಆಯೋಜಿಸಲಾಗಿದ್ದ ಯುವ ಸಮಾವೇಶದಲ್ಲಿ, ‘ರಾಜಕೀಯದಲ್ಲಿ ನಾನು ವಿಫಲ ವಿದ್ಯಾರ್ಥಿ. ಏಕೆಂದರೆ, ನಾನು ಚುನಾವಣೆಯಲ್ಲಿ ಸೋತಿದ್ದೇನೆ. ನಮಗೆ ಅನುಭವವಿಲ್ಲದ ಅನೇಕ ಸಂಗತಿಗಳನ್ನು ಒಟ್ಟಿಗೆ ಮಾಡಲು ಮುಂದಾಗಬಾರದು ಎಂಬುದು ಅನುಭವಕ್ಕೆ ಬಂದಿದೆ’ ಎಂದು ನಂದನ್‌ ನಿಲೇಕಣಿಯವರ ಹೇಳಿಕೆಗೆ ಪ್ರತಿಕ್ರಿಯೆಯಾಗಿ ರೋಹಿಣಿ ಮೇಲಿನಂತೆ ಹೇಳಿದರು.

‘ನಂದನ್‌ ಚುನಾವಣೆಗೆ ಸ್ಪರ್ಧಿಸಿದ್ದು ನಮ್ಮ ಜೀವನದಲ್ಲಿ ಬಹು ಆಸಕ್ತಿಯ ಹಾಗೂ ಕಷ್ಟಕರ ಬೆಳವಣಿಗೆ’ ಎಂದ ರೋಹಿಣಿ, ‘ಇಂದು ಪ್ರತಿಯೊಂದಕ್ಕೂ ಜನ ರಾಜಕಾರಣಿಗಳತ್ತ ನೋಡುತ್ತಾರೆ. ಎಲ್ಲರ ಜೀವನದಲ್ಲಿ ಬದಲಾವಣೆ ತರುವ ಶಕ್ತಿ ಇರುವಂಥವರು ಜನಪ್ರತಿನಿಧಿಗಳು. ಅವರ ಬಗ್ಗೆ ಗೌರವವಿದೆ’ ಎಂದರು.

ಪ್ರತಿಕ್ರಿಯಿಸಿ (+)