ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವಸಂಸ್ಥೆಯ ನಿರ್ಬಂಧ ಉಲ್ಲಂಘಿಸಿದ ಉತ್ತರ ಕೊರಿಯಾ

Last Updated 3 ಫೆಬ್ರುವರಿ 2018, 20:07 IST
ಅಕ್ಷರ ಗಾತ್ರ

ವಿಶ್ವಸಂಸ್ಥೆ : ‌ ವಿಶ್ವಸಂಸ್ಥೆಯ ನಿರ್ಬಂಧಗಳನ್ನು ಉಲ್ಲಂಘಿಸಿ ಉತ್ತರ ಕೊರಿಯಾವು ಕಲ್ಲಿದ್ದಲು, ಕಬ್ಬಿಣ, ಉಕ್ಕು ಮತ್ತಿತರ ಸರಕುಗಳನ್ನು ರಫ್ತು ಮಾಡಿ ಕಳೆದ ವರ್ಷ ಅಂದಾಜು ₹ 1,282 ಕೋಟಿ (20 ಕೋಟಿ ಅಮೆರಿಕನ್ ಡಾಲರ್) ಆದಾಯ ಗಳಿಸಿದೆ ಎಂದು ವರದಿಯೊಂದು ತಿಳಿಸಿದೆ.

‘ನಿಷೇಧ ಹೇರಿದ ಬಹುತೇಕ ಎಲ್ಲಾ ಸರಕುಗಳನ್ನೂ ಉತ್ತರ ಕೊರಿಯಾ ರಫ್ತು ಮಾಡುತ್ತಿದೆ. ಚೀನಾ, ಮಲೇಷ್ಯಾ, ದಕ್ಷಿಣ ಕೊರಿಯಾ, ರಷ್ಯಾ ಮತ್ತು ವಿಯೆಟ್ನಾಂಗಳಿಗೆ ಕಲ್ಲಿದ್ದಲು ಸರಬರಾಜು ಆಗಿದೆ. ಕಣ್ಣುತಪ್ಪಿಸುವ ಹಲವು ಕುತಂತ್ರದ ಮಾರ್ಗಗಳನ್ನು ಇದಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ’ ಎಂದು ತಜ್ಞರ
ನ್ನೊಳಗೊಂಡ ವಿಶ್ವಸಂಸ್ಥೆಯ ತಂಡ ನೀಡಿದ ವರದಿಯಲ್ಲಿ ಹೇಳಲಾಗಿದೆ.

‘ಕ್ಷಿಪಣಿ ಮತ್ತು ರಾಸಾಯನಿಕ ಶಸ್ತ್ರಾಸ್ತ್ರಗಳ ಅಭಿವೃದ್ಧಿಯ ಉದ್ದೇಶದಿಂದ ಉತ್ತರ ಕೊರಿಯಾವು ಸಿರಿಯಾ ಮತ್ತು ಮ್ಯಾನ್ಮಾರ್ ಜೊತೆ ಸೇನಾ ಸಹಕಾರವನ್ನು ಮುಂದುವರಿಸಿರುವ ಕುರಿತು ಸಾಕಷ್ಟು ಸಾಕ್ಷ್ಯಗಳು ಲಭ್ಯವಾಗಿವೆ’ ಎಂಬ ಅಂಶವನ್ನೂ ವರದಿ ಬಿಚ್ಚಿಟ್ಟಿದೆ.

ಉತ್ತರ ಕೊರಿಯಾ ನಡೆಸುತ್ತಿರುವ ಸೇನಾ ಯೋಜನೆಗಳಿಗೆ ಹಣಕಾಸು ಪೂರೈಕೆ ಸ್ಥಗಿತವಾಗಬೇಕು ಎಂಬ ಉದ್ದೇಶದಿಂದ ಕಳೆದ ವರ್ಷ ವಿಶ್ವಸಂಸ್ಥೆಯು ಸರಣಿ ನಿರ್ಬಂಧಗಳನ್ನು ಹೇರಿತ್ತು.
**
ಹಡಗುಗಳಿಗೆ ತಡೆ

‘ಕಲ್ಲಿದ್ದಲು ಮತ್ತು ಪೆಟ್ರೋಲಿಯಂ ಉತ್ಪನ್ನಗಳನ್ನು ಹೊತ್ತ ಏಳು ಹಡಗುಗಳನ್ನು ಈವರೆಗೆ ವಿವಿಧ ರಾಷ್ಟ್ರಗಳ ಬಂದರುಗಳಲ್ಲಿ ತಡೆ
ಯಲಾಗಿದೆ. ಉತ್ತರ ಕೊರಿಯಾದ ಅತಿರೇಕದ ಚಟುವಟಿಕೆಗಳನ್ನು ತಡೆಯುವ ಇಂಥ ಕ್ರಮಗಳು ಇನ್ನಷ್ಟು ಹೆಚ್ಚಬೇಕಿದೆ’ ಎಂದು ತಜ್ಞರ ತಂಡ ಅಭಿಪ್ರಾಯಪಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT