ಹಾಕಿ: ರೇನ್‌ಬೋ ಕ್ಲಬ್‌ಗೆ ಜಯ

7

ಹಾಕಿ: ರೇನ್‌ಬೋ ಕ್ಲಬ್‌ಗೆ ಜಯ

Published:
Updated:

ಬೆಂಗಳೂರು: ಭಗತ್‌ ಬಾಬು ಕೈಚಳಕ ದಲ್ಲಿ ಅರಳಿದ ಮೂರು ಗೋಲುಗಳ ನೆರವಿನಿಂದ ರೇನ್‌ಬೋ ಕ್ಲಬ್‌ ತಂಡ ಬೆಂಗಳೂರು ಹಾಕಿ ಸಂಸ್ಥೆ ಆಶ್ರಯದ ‘ಎ’ ಡಿವಿಷನ್‌ ಲೀಗ್‌ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ ಜಯಭೇರಿ ಮೊಳಗಿಸಿದೆ.

ಶನಿವಾರ ನಡೆದ ಹೋರಾಟದಲ್ಲಿ ರೇನ್‌ಬೋ ಕ್ಲಬ್‌ 10–0 ಗೋಲು ಗಳಿಂದ ಫ್ಲೈಯಿಂಗ್‌ ಕ್ಲಬ್‌ ತಂಡವನ್ನು ಮಣಿಸಿತು.

ವಿಜಯಿ ತಂಡದ ಭಗತ್‌ ಬಾಬು (24, 40 ಮತ್ತು 44ನೇ ನಿಮಿಷ) ಮೂರು ಗೋಲು ಗಳಿಸಿದರೆ, ರಾವಿನ್‌ (2 ಮತ್ತು 16ನೇ ನಿ.) ಮತ್ತು ಸಂದೀಪ್‌ ಕುಮಾರ್‌ (4 ಮತ್ತು 45ನೇ ನಿ.) ತಲಾ ಎರಡು ಗೋಲು ಬಾರಿಸಿದರು.

ದಿನದ ಮೊದಲ ಪಂದ್ಯದಲ್ಲಿ ಎಸ್‌ಡಬ್ಲ್ಯುಆರ್‌, ಹುಬ್ಬಳ್ಳಿ ತಂಡ 4–1 ಗೋಲುಗಳಿಂದ ಐಡಿಯಲ್‌ ಸ್ಪೋರ್ಟ್ಸ್‌ ಕ್ಲಬ್‌ ‘ಎ’ ತಂಡವನ್ನು ಸೋಲಿಸಿತು.

ರೇಂಜರ್ಸ್‌ ಕ್ಲಬ್‌ 2–1ಗೋಲು ಗಳಿಂದ ಎಚ್ಎಂಟಿ ವಿರುದ್ಧ ಗೆದ್ದಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry