ಮಂಗಳವಾರ, ಡಿಸೆಂಬರ್ 10, 2019
20 °C

22 ಭಾರತೀಯ ನಾವಿಕರಿದ್ದ ತೈಲ ಹಡಗು ಪಶ್ಚಿಮ ಆಫ್ರಿಕಾ ಕರಾವಳಿಯಲ್ಲಿ ನಾಪತ್ತೆ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

22 ಭಾರತೀಯ ನಾವಿಕರಿದ್ದ ತೈಲ ಹಡಗು ಪಶ್ಚಿಮ ಆಫ್ರಿಕಾ ಕರಾವಳಿಯಲ್ಲಿ ನಾಪತ್ತೆ

ನವದೆಹಲಿ: 22 ಮಂದಿ ಭಾರತೀಯ ನಾವಿಕರಿದ್ದ ತೈಲ ಹಡಗು ಪಶ್ಚಿಮ ಆಫ್ರಿಕಾದ ಕರಾವಳಿಯಲ್ಲಿ ನಾಪತ್ತೆಯಾಗಿದೆ.

ಗಲ್ಫ್‌ ಗಿನಿಯಾದ ಬೆನಿನ್‌ ಸಮೀಪ ಹಡಗು ನಾಪತ್ತೆಯಾಗಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. ಘಟನೆಗೆ ಸಂಬಂಧಿಸಿ ನೈಜೀರಿಯಾದ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿರುವುದಾಗಿ ವಿದೇಶಾಂಗ ಸಚಿವಾಲಯ ಹೇಳಿದೆ.

ಮುಂಬೈ ಮೂಲದ ‘ಆಂಗ್ಲೊ ಈಸ್ಟರ್ನ್ ಹಡಗು ಕಂಪೆನಿ’ಗೆ ಸೇರಿದ ವಾಣಿಜ್ಯ ಹಡಗು ಗಲ್ಫ್‌ ಗಿನಿಯಾದ ಬೆನಿನ್‌ ಸಮೀಪ ನಾಪತ್ತೆಯಾಗಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರವಿಶ್‌ ಕುಮಾರ್‌ ಟ್ವೀಟ್‌ ಮಾಡಿದ್ದಾರೆ.

ಭಾರತೀಯ ನಾವಿಕರನ್ನು ಪತ್ತೆಹಚ್ಚಲು ನೈಜೀರಿಯಾ ಅಧಿಕಾರಿಗಳು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಅಲ್ಲಿನ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದೇವೆ ಎಂದು ವಿದೇಶಾಂಗ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)